ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹೆಸರನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಬಿಬಿಎಂಪಿ ಹಲವಾರು ಯೋಜನೆಗಳನ್ನು (BBMP Projects) ಹಮ್ಮಿಕೊಂಡಿದೆ. ಬ್ರ್ಯಾಂಡ್ ಬೆಂಗಳೂರು – ವೈಬ್ರೆಂಟ್ ಬೆಂಗಳೂರು ಯೋಜನೆಯಡಿ 250 ಮೀಟರ್ ಎತ್ತರದ ಸ್ಕೈ-ಡೆಕ್ (Skydeck) ನಿರ್ಮಾಣ ಮಾಡುವುದಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರ ಒಟ್ಟು ವೆಚ್ಚ 350 ಕೋಟಿ ಎಂದು ಅಂದಾಜಿಸಲಾಗಿದೆ.
ಸ್ಕೈ-ಡೆಕ್ ಯೋಜನೆಯ ಅನುಷ್ಠಾನಕ್ಕಾಗಿ 2024-25ರ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಪ್ರಾರಂಭಿಕ ಯೋಜನಾ ವೆಚ್ಚ 50 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಈ ಯೋಜನೆ ಎಲ್ಲಿ ಪ್ರಾರಂಭವಾಗಲಿದೆ ಎಂಬ ಯಾವುದೇ ಮಾಹಿತಿ ಬಜೆಟ್‌ನಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ
Advertisement
ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ.
ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ… pic.twitter.com/s153kRzlqo
— DK Shivakumar (@DKShivakumar) October 17, 2023
Advertisement
ದೇಶದ ಅತಿ ಎತ್ತರದ ವೀಕ್ಷಣಾ ಗೋಪುರ
ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಷನ್ ಸಹಕಾರದೊಂದಿಗೆ ಈ ಸ್ಕೈ ಡೆಕ್ ನಿರ್ಮಾಣ ಮಾಡಲಿದೆ. ಯೋಜನೆ ಪೂರ್ಣಗೊಂಡ ಬಳಿಕ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಸ್ಕೈ-ಡೆಕ್ ಪಾತ್ರವಾಗಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ 6 ಕಾಂಗ್ರೆಸ್ ಶಾಸಕರು ಅನರ್ಹ
Advertisement
ಬೈಯಪ್ಪನಹಳ್ಳಿ ಬಳಿಯ ಎನ್‌ಜಿಇಎಫ್ ಅಥವಾ ಸೋಪ್ ಫ್ಯಾಕ್ಟರಿಯ ಭೂಮಿಯಲ್ಲಿ ಈ ಸ್ಕೈ-ಡೆಕ್ ನಿರ್ಮಾಣ ಮಾಡುವ ಪ್ರಸ್ತಾಪವಿತ್ತು. ಇದರಲ್ಲಿ ಬಹುತೇಕ ಎನ್‌ಜಿಎಫ್ ಭೂಮಿಯೇ ಯೋಜನೆಗೆ ಆಯ್ಕೆಯಾಗಿದೆ. ಎನ್‌ಜಿಎಫ್ 105 ಎಕರೆ ವಿಸ್ತೀರ್ಣದಲ್ಲಿದ್ದು ಇದರಿಂದ 10 ಎಕರೆ ಪ್ರದೇಶವನ್ನು ಸ್ಕೈಡೆಕ್ ಯೋಜನೆಗೆ ನೀಡಲು ಸರ್ಕಾರ ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.
Advertisement
ಸ್ಕೈ-ಡೆಕ್ ನಿರ್ಮಾಣವಾದ ಬಳಿಕ ಶುಲ್ಕ ಪಾವತಿಸಿ ನೀವು ಪ್ರವೇಶ ಪಡೆಯಬಹುದು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತ್ತೆ ‘ಪಾಕಿಸ್ತಾನ್ ಜಿಂದಾಬಾದ್’ ಗದ್ದಲ; ದೋಸ್ತಿಗಳಿಂದ ಸಭಾತ್ಯಾಗ