ಬೆಂಗಳೂರು: ಬಡವರ ಹಸಿವು ನೀಗಿಸಲು, ಕೈಗೆಟಕುವ ದರದಲ್ಲಿ ಆಹಾರ ಸಿಗುವಂತಾಗಲು ಮತ್ತೆ ಹೊಸ 50 ಇಂದಿರಾ ಕ್ಯಾಂಟೀನ್‌ಗಳು (Indira Canteen) ಬೆಂಗಳೂರಿನಲ್ಲಿ (Bengaluru) ತಲೆ ಎತ್ತಲಿವೆ.
ಬಿಬಿಎಂಪಿ ಬಜೆಟ್‌ನಲ್ಲಿ (BBMP Budget) ಘೋಷಿಸಿದ ಈ ಹೊಸ ಇಂದಿರಾ ಕ್ಯಾಂಟೀನ್‌ಗಳು ಸ್ಥಿರ ಅಥವಾ ಮೊಬೈಲ್ ಮೋಡ್‌ನಲ್ಲಿ ಸ್ಥಾಪನೆಯಾಗಲಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಈ ವರ್ಷ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ. ಇಂದಿರಾ ಕ್ಯಾಂಟೀನ್‌ಗಳಿಗಾಗಿ ಈ ವರ್ಷದ ಬಜೆಟ್‌ನಲ್ಲಿ ಒಟ್ಟು 70 ಕೋಟಿ ರೂ.ಗಳನ್ನು ನೀಡಲಾಗಿದೆ. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್ ಭಾರತ್’ ವಿಮೆ!
Advertisement
Advertisement
ಬ್ರ‍್ಯಾಂಡ್ ಬೆಂಗಳೂರು- ಆರೋಗ್ಯಕರ ಬೆಂಗಳೂರು – ಆರೋಗ್ಯ ಕ್ಷೇತ್ರಕ್ಕೇನು ಸಿಕ್ತು?
– ಬೆಂಗಳೂರಿನಲ್ಲಿ ಆರೋಗ್ಯ ಸೇವೆ ಉನ್ನತೀಕರಣಕ್ಕೆ ಮುಂದಿನ 2 ವರ್ಷದಲ್ಲಿ 200 ಕೋಟಿ ರೂ. ವೆಚ್ಚ. ಇದರಲ್ಲಿ ಈ ವರ್ಷ 100 ಕೋಟಿ ರೂ.ಗಳ ಯೋಜನೆ ಶುರು.
– ಬೆಂಗಳೂರು ಆರೋಗ್ಯ ಆಯುಕ್ತ ಹೊಸ ಹುದ್ದೆ ಸೃಷ್ಟಿ.
– 144 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 225 ನಮ್ಮ ಕ್ಲಿನಿಕ್, 27 ಹೆರಿಗೆ ಆಸ್ಪತ್ರೆ, 7 ಫಸ್ಟ್ ರೆಫರಲ್ ಯೂನಿಟ್ ನಿರ್ವಹಣೆಗೆ 20 ಕೋಟಿ ರೂ.
– ಸಮಗ್ರ ಸದೃಢ ಆರೋಗ್ಯ ಯೋಜನೆಯಡಿ ಮುಂದಿನ 3 ವರ್ಷಕ್ಕೆ ಸಮಗ್ರ ಯೋಜನೆ
– ಇದರ ಅಡಿಯಲ್ಲಿ 40 ಹೊಸ ನಗರ ಪ್ರಾಥಮಿಕ ಕೇಂದ್ರ ನಿರ್ಮಾಣ ಮತ್ತು 81 ಪ್ರಾಥಮಿಕ ಆರೋಗ್ಯ ಕೇಂದ್ರ ನವೀಕರಣಕ್ಕೆ ಒಟ್ಟು 64 ಕೋಟಿ ರೂ.
– 24 ಹೆರಿಗೆ ಆಸ್ಪತ್ರೆಗಳು ಮತ್ತು ರೆಫರಲ್ ಘಟಕಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ 24 ಕೋಟಿ ರೂ.
– ಈ ವರ್ಷ 27 ಉಚಿತ ಫಿಸಿಯೋಥೆರಪಿ ಕೇಂದ್ರಗಳ ಸ್ಥಾಪನೆ.
– ಎಲೆಕ್ಟ್ರಿಕ್ ವಾಹನದಲ್ಲಿ ಮನೆ ಬಾಗಿಲಿನಲ್ಲೇ ಚುಚ್ಚುಮದ್ದು ಹಾಕಿಸುವ ಆರೋಗ್ಯ ಸಾರಥಿ ಯೋಜನೆ.
– ನಮ್ಮ ಕ್ಲಿನಿಕ್‌ಗಳ 100 ಪ್ರಯೋಗಾಲಯಗಳಲ್ಲಿ ಇನ್ನೂ ಹೆಚ್ಚಿನ 20 ವಿವಿಧ ಚಿಕಿತ್ಸಾ ಸಂಬಂಧಿತ ಪರೀಕ್ಷೆ.
– 14 ಅತ್ಯಾಧುನಿಕ ಜೀವ ರಕ್ಷಕ ಅಂಬುಲೆನ್ಸ್ ಖರೀದಿ.
– ಈ ಎಲ್ಲಾ ಕಾರ್ಯಗಳಿಗೆ ಈ ವರ್ಷ 25 ಕೋಟಿ ರೂ. ಅನುದಾನ.
– ವಿಶೇಷ ಚೇತನ ಮಕ್ಕಳಿಗೆ ದಿನದ ಆರೈಕೆ ಕೇಂದ್ರ ಸ್ಥಾಪನೆಗೆ 1 ಕೋಟಿ ರೂ.
– ಪಾಲಿಕೆಯ ಆಂತರಿಕ ವೈದ್ಯರ ತಂಡ ಹಾಗೂ ಕ್ಷೇತ್ರ ತಜ್ಞರ ಸಹಾಯದಿಂದ ಮನೋಬಿಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಸಂವಾದ.
– ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ರುದ್ರಭೂಮಿ, ಚಿತಾಗಾರ ನಿರ್ಮಾಣ. ರುದ್ರಭೂಮಿ ಹಾಗೂ ಚಿತಾಗಾರ ಉನ್ನತೀಕರಿಸಲು 15 ಕೋಟಿ ರೂ.
– ಶುಚಿಯಾದ ಮಾಂಸದ ಬೇಡಿಕೆ ಈಡೇರಿಕೆ ಹಾಗೂ ಪೂರೈಕೆಗೆ 2 ವಲಯಗಳಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣ. ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕ ನಿರ್ಮಾಣಕ್ಕೆ ಒಟ್ಟು 10 ಕೋಟಿ ರೂ. ನೀಡಲಾಗಿದೆ. ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್ ಪಾರ್ಕಿಂಗ್!
Advertisement
Advertisement