ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಯಾವುದೇ ಸಭೆ, ಕಾರ್ಯಕ್ರಮ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಹೀಗಿದ್ದರೂ ಬಿಬಿಎಂಪಿಯ ಬಿಜೆಪಿ ಕಾರ್ಪೊರೇಟರ್ ಒಬ್ಬರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ಜಕ್ಕೂರು ವಾರ್ಡಿನ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಬರ್ತ್ ಡೇ ಆಚರಿಸಿಕೊಂಡಿಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ, ಸುರಕ್ಷತೆಯೂ ಇರಲಿಲ್ಲ. ಬೆಂಬಲಿಗರ ಮಧ್ಯೆ ನಿಂತು ಮುನೇಂದ್ರ ಕುಮಾರ್ ದೊಡ್ಡ ಕೇಕ್ ಕಟ್ ಮಾಡಿದ್ದಾರೆ. ಇದನ್ನೂ ಓದಿ: ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್
ಆಡಳಿತ ಪಕ್ಷದ ಮುಖಂಡರ ಬರ್ತ್ ಡೇ ಅಂದ್ರೆ ನಿಯಮಗಳು ಅನ್ವಯಿಸಲ್ವಾ? ಸಾಮಾನ್ಯ ಜನರಿಗೊಂದು ನಿಯಮ, ರಾಜಕಾರಣಿಗಳಿಗೊಂದು ನಿಯಮವೇ? ಬಿಜೆಪಿ ಮುಖಂಡರಿಗೆ ಜನರ ಸುರಕ್ಷತೆಗಿಂತಲೂ ಬರ್ತ್ ಡೇ ಹೆಚ್ಚಾಯ್ತಾ ಎಂದು ಪ್ರಶ್ನಿಸಿ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಇತ್ತೀಚೆಗೆ ತುರುವೇಕೆರೆ ಶಾಸಕ ಮಸಾಲೆ ಜಯರಾಂ ಸಹ ಹೀಗೇ ಎಡವಟ್ಟು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಕಾರ್ಪೊರೇಟರ್ ಮುನೇಂದ್ರ ಕುಮಾರ್ ಸಾಮಾಜಿಕ ಅಂತರ, ಲಾಕ್‍ಡೌನ್ ಆದೇಶ ಮರೆತು ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಸಾರ್ವನಿಕರ ಅಸಮಾಧಾನಕ್ಕೆ ಕಾರಣವಾಗಿದೆ.