ಬೆಂಗಳೂರು: ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರ ಮಾತಿಗೆ ಮಣಿದ ಬೃಹತ್ ಬೆಂಗಳೂ ಮಹಾನಗರ ಪಾಲಿಕೆ ಇದೀಗ ಸಿಲಿಕಾನ್ ಸಿಟಿ ಜನರ ಮೇಲೆ ತೆರಿಗೆ ಹೇರಲು ಮುಂದಾಗಿದೆ.
ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳಿಂದ ಬಿಎಂಟಿಸಿ ಬಸ್ ಗಳು ಹಾಳಾಗಿವೆ. ಹಾಗಾಗಿ ಬಿಬಿಎಂಪಿ ನಮಗೆ ತೆರಿಗೆ ನೀಡಬೇಕು ಅಂತಾ ಹೇಳಿ ಸಚಿವ ವಿವಾದಕ್ಕೆ ತುತ್ತಾಗಿದ್ದರು. ಈ ಬಗ್ಗೆ ಬಿಬಿಎಂಪಿ ವಿರೋಧ ಪಕ್ಷ ಹಾಗೂ ಬೆಂಗಳೂರಿನ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದ್ರೆ ಇದ್ಯಾವುದನ್ನು ಲೆಕ್ಕಿಸದೇ ಇದೀಗ ಭೂ ಸಾರಿಗೆ ಉಪಕರ ವಸೂಲಿಗೆ ಬಿಬಿಎಂಪಿ ಮುಂದಾಗಿದೆ.
Advertisement
Advertisement
ಮೂರು ವರ್ಷಗಳ ಹಿಂದಷ್ಟೇ ಆಸ್ತಿ ತೆರಿಗೆ ಶೇ. 20ರಿಂದ 25 ಹೆಚ್ಚಿಸಿ ಆಸ್ತಿ ಮಾಲೀಕರ ಮೇಲೆ ಗದಾಪ್ರಹಾರ ಮಾಡಿದ್ದ ಬಿಬಿಎಂಪಿ, ಇದೀಗ ಆಸ್ತಿ ಮಾಲೀಕರ ಮೇಲೆ ಶೇ. 2 ಹೆಚ್ಚುವರಿ ತೆರಿಗೆ ಹೇರಿದೆ.
Advertisement
ಬಿಬಿಎಂಪಿ ಬಿಎಂಟಿಸಿ ಇಲಾಖೆಗೆ ಹಣ ನೀಡಬೇಕೆಂದು ಕಳೆದ ಕೆಲದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದ್ರೆ ಡಿಸಿ ತಮ್ಮಣ್ಣ ಪ್ರಸ್ತಾವನೆ ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಹೆಚ್ಚಳ ಮಾಡಿದೆ. ಈ ವಿಷಯವನ್ನು ಇಂದು ಕೌನ್ಸಿಲ್ ನಲ್ಲಿ ಅನುಮೋದನೆಗೆ ಮಂಡಿಸಲಾಗುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv