ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಬೆಂಗಳೂರಿನ ರಸ್ತೆಯೊಂದಕ್ಕೆ ಇಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನುಮೋದಿಸಿದೆ. ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾಸಿಟಿ ಮಾಲ್ ಜಂಕ್ಷನ್ ವರೆಗಿನ ವರ್ತುಲ ರಸ್ತೆಗೆ “ಪುನೀತ್ ರಾಜ್ ಕುಮಾರ್ ರಸ್ತೆ’ ಎಂದು ನಾಮಕರಣ ಮಾಡುವ ಕುರಿತು ಬಿಬಿಎಂಪಿ ಸಭೆಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ತಗೆದುಕೊಳ್ಳಲಾಗಿದೆ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು
ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ವರ್ತುಲ ರಸ್ತೆಗೆ ನಾಮಕರಣ ಮಾಡಬೇಕೆಂದು ಬಿಬಿಎಂಪಿಗೆ 700ಕ್ಕೂ ಹೆಚ್ಚು ಪುನೀತ್ ಅಭಿಮಾನಿಗಳು ಸಹಿ ಮಾಡಿದ ಮನವಿ ಪತ್ರ ನೀಡಿದ್ದರು. ಹಲವಾರು ಸಂಘ ಸಂಸ್ಥೆಗಳು ಕೂಡ ಪಾಲಿಕೆಗೆ ಪತ್ರಗಳನ್ನು ಬರೆಯುವ ಮೂಲಕ ಒತ್ತಾಯಿಸಿದ್ದವು. ಅಲ್ಲದೇ ಇದೇ ರಸ್ತೆಗೆ ಡಾ. ಅಂಬರೀಶ್ ಅವರ ಹೆಸರನ್ನು ಇಡಬೇಕು ಎಂದು ಅಂಬರೀಶ್ ಅಭಿಮಾನಿಗಳು ಕೂಡ ಮನವಿ ಪತ್ರ ಕೊಟ್ಟಿದ್ದರು. ಕೊನೆಗೂ ಬಿಬಿಎಂಪಿ ‘ಪುನೀತ್ ರಾಜ್ ಕುಮಾರ್ ರಸ್ತೆ’ಗೆ ಒಪ್ಪಿಗೆ ಕೊಟ್ಟಿದೆ. ಇದನ್ನೂ ಓದಿ : ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್
Advertisement
ಈವರೆಗೂ ಒಂದೇ ಕುಟುಂಬದ ಮೂವರು ಕಲಾವಿದರ ಹೆಸರನ್ನು ಕರ್ನಾಟಕದ ಯಾವ ರಸ್ತೆಗೂ ನಾಮಕರಣ ಮಾಡಿಲ್ಲ. ಹಾಗಾಗಿ ಇದೊಂದು ದಾಖಲೆಯ ನಡೆ ಕೂಡ ಆಗಿದೆ. ಬೆಂಗಳೂರಿನ ಹಲವು ರಸ್ತೆಗಳಿಗೆ ಮತ್ತು ಮೇಲ್ಸೇತುವೆಗಳಿಗೆ ಡಾ.ರಾಜ್ ಕುಮಾರ್ ಹೆಸರು ಇಡಲಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರನ್ನು ಬೆಂಗಳೂರಿನ ಹಲವು ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ. ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’
Advertisement
ಪುನೀತ್ ನಿಧನದ ನಂತರ ರಾಜ್ಯದ ಅನೇಕ ಕಡೆ ಪುನೀತ್ ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಹಲವು ರಸ್ತೆಗಳಿಗೆ ಹೆಸರನ್ನು ಇಡಲಾಗಿದೆ. ಈ ಮೂಲಕ ನಿರಂತರವಾಗಿ ಪುನೀತ್ ಅವರಿಗೆ ಅಭಿಮಾನಿಗಳು ಅಭಿಮಾನ ತೋರಿಸುತ್ತಿದ್ದಾರೆ.