ಬೆಂಗಳೂರು: ನಗರದ ರಸ್ತೆ, ಮೇಲ್ಸೇತುವೆಗಳ ಅಭಿವೃದ್ಧಿಗೆ ಸರ್ಕಾರದಿಂದ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತೆ. ಆದರೆ ಪಾಲಿಕೆ ಮಾತ್ರ ರಸ್ತೆ ದತ್ತು ಮಾದರಿಯಲ್ಲಿ, ಮೇಲ್ಸೇತುವೆಗಳನ್ನು ದತ್ತು ನೀಡಲು ಯೋಜನೆ ರೂಪಿಸುತ್ತಿದೆ.
ಬಿಬಿಎಂಪಿ ರಸ್ತೆ ದತ್ತು ಮಾದರಿಯಂತೆ, ಮೇಲ್ಸೇತುವೆ ಯೋಜನೆ ಜಾರಿಗೊಳಿಸುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಸ್ತೆ ದತ್ತು ಯೋಜನೆಯಡಿ, ಸಂಘ-ಸಂಸ್ಥೆಗಳಿಗೆ ದತ್ತು ಪಡೆದು ನಿರ್ವಹಣೆ ಮಾಡುವ ಯೋಜನೆಯಡಿ ಈಗಾಗಲೇ ನಗರದಲ್ಲಿ 13 ರಸ್ತೆಗಳನ್ನು ವಿವಿಧ ಸಂಘ-ಸಂಸ್ಥೆಗಳು ದತ್ತು ಪಡೆದು ನಿರ್ವಹಿಸುತ್ತಿವೆ. ಇದರ ಮಾದರಿಯಲ್ಲಿಯೇ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳನ್ನು ಸೌಂದರ್ಯಿಕರಣ ಅಡಾಪ್ಟ್ – ಎ ಫ್ಲೈ ಓವರ್ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ: ಸಂಘ, ಸಂಸ್ಥೆಗಳಿಗೇ ರಸ್ತೆಗಳ ಸ್ವಚ್ಛ, ಸಂಪೂರ್ಣ ನಿರ್ವಹಣೆ ಹೊಣೆ
Advertisement
Advertisement
ಫ್ಲೈಓವರ್ ಮತ್ತು ಅಂಡರ್ ಪಾಸ್‍ಗಳನ್ನು ದತ್ತು ಪಡೆದು ನಿರ್ವಹಣೆ ಮಾಡುವುದಕ್ಕೆ ಮುಂದೆ ಬರುವ ಸಂಘ-ಸಂಸ್ಥೆಗಳಿಗೆ ಅವಕಾಶ ನೀಡಲಾಗುವುದು ಎಂದು ಪಾಲಿಕೆಯ ಆಯುಕ್ತ ಅನೀಲ್ ಕುಮಾರ್ ಹೇಳಿದ್ದಾರೆ.
Advertisement
ದತ್ತು ಯೋಜನೆಯಡಿ ಪಡೆದುಕೊಂಡ ನಿರ್ವಹಣೆಗೆ ಬಿಬಿಎಂಪಿಯಿಂದ ಯಾವುದೇ ಅನುದಾನ ನೀಡಲ್ಲ. ಸಂಸ್ಥೆಗಳೆ ಸಾಮಾಜಿಕ ಜವಾಬ್ದಾರಿಯಡಿ ಹೂಡಿಕೆ ಮಾಡಬೇಕಾಗಲಿದೆ. ಈಗಾಗಲೇ 25 ಸಂಸ್ಥೆಗಳು, ನಗರದ 30 ರಸ್ತೆಗಳನ್ನು ದತ್ತು ಪಡೆದು ನಿರ್ವಹಣೆಗೆ ಮುಂದೆ ಬಂದಿವೆ. ಇನ್ನೂ ಸರ್ಕಾರದಿಂದ ಪಾಲಿಕೆಗೆ ಬಂದ ಅನುದಾನದಲ್ಲಿ ಏನು ಅಭಿವೃದ್ಧಿ ಕೆಲಸಗಳನ್ನು ಬಿಬಿಎಂಪಿ ಮಾಡಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.