Bengaluru CityCinemaDistrictsKarnatakaLatestMain PostSandalwoodTV Shows

ಬಿಗ್ ಬಾಸ್ ಮನೆಯಲ್ಲಿ ಸ್ವಾರ್ಥಿ ಇವರೇ: ಕಿಚ್ಚನಿಗೆ ಸ್ಪರ್ಧಿಗಳಿಂದ ದೂರು

ಬಿಗ್ ಬಾಸ್(Bigg Boss Kannada) ಏಪಿಸೋಡ್ ಮಿಸ್ ಮಾಡದೇ ನೋಡುವ ಒಂದು ವರ್ಗದ ಜನರಿದ್ದರೆ, ಇನ್ನೊಂದ್ ಕಡೆ ಕಿಚ್ಚನಿಗಾಗಿ ವಾರದ ಪಂಚಾಯಿತಿ ನೋಡುವ ಬಹುದೊಡ್ಡ ವರ್ಗವೇ ಇದೆ. ಇದೀಗ ಕಿಚ್ಚನ ಪಂಚಾಯಿತಿಯಲ್ಲಿ ಹೆಚ್ಚು ಕಾಳಜಿ ಮಾಡುವುದು ಯಾರು ಮತ್ತು ಹೆಚ್ಚು ಸ್ವಾರ್ಥ ಬುದ್ದಿ ಹೊಂದಿರುವವರು ಯಾರು ಎಂದು ಸುದೀಪ್ (Kiccha Sudeep) ಎದುರಲ್ಲೇ ಸಖತ್ ಚರ್ಚೆ ಆಗಿದೆ.

ದೊಡ್ಮನೆ ಆಟ ಇದೀಗ 57 ದಿನಗಳನ್ನ ಪೂರೈಸಿ, 60ನೇ ದಿನದತ್ತ ಮುನ್ನುಗ್ಗುತ್ತಿದೆ. ವಾರದ ಪಂಚಾಯಿತಿಯಲ್ಲಿ ಯಾರು ಹೆಚ್ಚು ಕಾಳಜಿ ಮಾಡ್ತಾರೆ ಮತ್ತು ಸ್ವಾರ್ಥ ಬುದ್ದಿ ಇರುವವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿದೆ. ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡವರು. ಇದನ್ನೂ ಓದಿ: ಕ್ಯಾನ್ಸರ್‌ ಗೆದ್ದಿದ್ದ 24ರ ಹರೆಯದ ನಟಿ ಐಂದ್ರಿಲಾ ಶರ್ಮಾ ಹೃದಯಾಘಾತದಿಂದ ನಿಧನ

ರಾಜಣ್ಣ ಅವರಿಗೆ ಬಿಗ್ ಬಾಸ್ ಶೋನಿಂದ ಜನಪ್ರಿಯತೆ ಹೆಚ್ಚಿದೆ. ಆರಂಭದ ವಾರಗಳಲ್ಲಿ ಕೊಂಚ ಸೈಲೆಂಟ್ ಆಗಿದ್ದ ಅವರು ಈಗ ವೈಲೆಂಟ್ ಆಗಿದ್ದಾರೆ. ತಮ್ಮ ಅನಿಸಿಕೆಯನ್ನು ನೇರವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರಿಂದಾಗಿ ಮನೆಯಲ್ಲಿ ಕೆಲವೊಮ್ಮೆ ಜಗಳ ಆಗಿದ್ದು ಕೂಡ ಇದೆ. ಅವರಲ್ಲಿನ ಒಂದಷ್ಟು ಗುಣಗಳು ಇನ್ನಿತರ ಸ್ಪರ್ಧಿಗಳಿಗೆ ಇಷ್ಟ ಆಗಿಲ್ಲ. ಅವರಿಗೆ ಸ್ವಾರ್ಥ ಬುದ್ಧಿ ಹೆಚ್ಚಿದೆ ಎಂದು ಬಹುತೇಕರು ಹೇಳಿದ್ದಾರೆ.

ಆರ್ಯವರ್ಧನ್ ಗುರೂಜಿ ಕೂಡ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗಿದ್ದಾರೆ. ಬಿಗ್ ಬಾಸ್ ಒಟಿಟಿಯಿಂದ ಟಿವಿ ಸೀಸನ್ ತನಕ ಅವರ ಬಿಗ್ ಬಾಸ್ ಜರ್ನಿ ನಡೆದುಕೊಂಡು ಬಂದಿದೆ. ಕೆಲವೊಮ್ಮೆ ಮುಗ್ಧರಂತೆ ಕಾಣಿಸಿಕೊಳ್ಳುವ ಅವರಿಗೆ ದೊಡ್ಮನೆಯ ಒಂದಷ್ಟು ಸದಸ್ಯರಿಂದ ಸ್ವಾರ್ಥಿ ಎಂಬ ಹಣೆಪಟ್ಟಿ ಸಿಕ್ಕಿದೆ. ದೀಪಿಕಾ ದಾಸ್, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಕೂಡ ಸ್ವಾರ್ಥಿಗಳ ಪಟ್ಟಿಯಲ್ಲಿ ಇದ್ದಾರೆ. ಸ್ವಾರ್ಥಿ ಎಂದು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಗುರೂಜಿಗೆ ಅತೀ ಹೆಚ್ಚು ವೋಟ್ ಬಿದ್ದಿದೆ. ಇನ್ನೂ ಬಿಗ್ ಬಾಸ್ ಮನೆಯಿಂದ ದೀಪಿಕಾ ದಾಸ್ ಹೊರ ನಡೆದಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button