ಈ ವಾರದ ಎಲಿಮಿನೇಷನ್‌ನಲ್ಲಿ ಬಿಗ್‌ಬಾಸ್ (Bigg Boss) ಕಾರ್ಯಕ್ರಮದಿಂದ ರಿಷಾ ಗೌಡ (Risha Gowda) ಹೊರ ಬಂದಿದ್ದಾರೆ. ಐದು ವಾರಗಳ ಕಾಲ ಮನೆಯಲ್ಲಿದ್ದ ರಿಷಾ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಹೋಗಿದ್ದರು. ಹೀಗೆ ವೈಲ್ಡ್ ಕಾರ್ಡ್ (Wild Card) ಎಂಟ್ರಿಯಲ್ಲಿ ಮನೆ ಒಳಗೆ ಹೋದ ಮೂವರು ಸ್ಪರ್ಧಿಗಳಲ್ಲಿ ಮೊದಲು ಹೊರ ಬಂದ ಸ್ಪರ್ಧಿ ರಿಷಾ. ಇದೀಗ ರಿಷಾ ಮನೆಯಿಂದ ಹೊರ ಬಂದ ಬಳಿಕ ಸ್ಪರ್ಧಿಗಳ ಆಟದ ವೈಖರಿಯನ್ನು ಕಣ್ಣಾರೆ ಕಂಡ ರಿಷಾ ಟಾಪ್ 5 ಸ್ಪರ್ಧಿಗಳನ್ನ ಪಟ್ಟಿ ಮಾಡಿದ್ದಾರೆ.
ರಿಷಾ ಪ್ರಕಾರ ಗಿಲ್ಲಿ, ಅಶ್ವಿನಿ, ರಕ್ಷಿತಾ, ರಘು ಅನುಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿ ಇದ್ದರೆ 5ನೇ ಸ್ಥಾನದಲ್ಲಿ ಧನುಷ್ ಅಥವಾ ಕಾವ್ಯ ಇರಲಿದ್ದಾರಂತೆ. ಹೀಗೆ ಸ್ಪರ್ಧಿಗಳನ್ನ ಪಟ್ಟಿ ಮಾಡಿ ಲೆಕ್ಕ ಹೇಳಿರುವ ರಿಷಾ ಈ ಸೀಸನ್‌ನಲ್ಲಿ ಗಿಲ್ಲಿಯೇ ಗೆಲ್ಲುವುದು ಪಕ್ಕಾ ಎಂದಿದ್ದಾರೆ. ಇದನ್ನೂ ಓದಿ: ಎಲ್ಲರ ಹತ್ರ ಮಾತಾಡ್ದಂಗೆ ನನ್ ಹತ್ರ ಮಾತಾಡ್ಬೇಡ: ಗಿಲ್ಲಿ ಮೇಲೆ ರಜತ್ ಗರಂ ಆಗಿದ್ಯಾಕೆ?
ಗಿಲ್ಲಿ (Gilli) ಗೆದ್ದರೆ ಅಶ್ವಿನಿ ಗೌಡ (Ashwini Gowda) ರನ್ನರ್‌ಅಪ್ ಆಗ್ತಾರಂತೆ. ಇನ್ನು ರಕ್ಷಿತಾ ಶೆಟ್ಟಿ (Rakshita Shetty) ಅವರನ್ನು ಸೆಕೆಂಡ್ ರನ್ನರ್ ಅಪ್ ಮಾಡಿರುವ ರಿಷಾ , ಮೂರನೇ ರನ್ನರ್ ಅಪ್ ಸ್ಥಾನವನ್ನು ರಘುಗೆ ನೀಡಿದ್ದಾರೆ. ಇನ್ನು ಟಾಪ್ 5ರ ಸ್ಥಾನದಲ್ಲಿ ಸ್ವಲ್ಪ ಗೊಂದಲ ಇದ್ದು ಕಾವ್ಯ ಅಥವಾ ಧನುಷ್ ಇಬ್ಬರಲ್ಲಿ ಒಬ್ಬರು ಆ ಸ್ಥಾನದಲ್ಲಿರುವ ಸಾಧ್ಯತೆ ಇದೆ ಎಂದಿದ್ದಾರೆ ರಿಷಾ. ಇದನ್ನೂ ಓದಿ: ಪತಿ ವಿರುದ್ಧ ಕೇಸ್ ದಾಖಲಿಸಿ 50 ಕೋಟಿ ಪರಿಹಾರ ಕೇಳಿದ `ಶ್ರೀಮತಿ’ ನಟಿ!

