‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ವಿನ್ನರ್ ಆಗಿ ಹನುಮಂತ (Hanumantha) ಗೆದ್ದು ಬೀಗಿದ್ದಾರೆ. ಬಿಗ್ ಬಾಸ್‌ನಲ್ಲಿದ್ದಾಗ ಅಲ್ಲಿ ಹನುಮಂತ ಮತ್ತು ಧನರಾಜ್ (Dhanraj Achar) ಸ್ನೇಹ ಹೈಲೆಟ್ ಆಗಿತ್ತು. ಈಗ ಶೋ ಮುಗಿದ ಬಳಿಕ ‘ದೋಸ್ತಾ ನೀ ಮಸ್ತಾ’ ಅಂತ ಖುಷಿಯಿಂದ ಹನುಮಂತನ ಗೆಲುವನ್ನು ಧನರಾಜ್ ಸಂಭ್ರಮಿಸಿದ್ದಾರೆ.
‘ಬಿಗ್ ಬಾಸ್ 11’ರ ಟ್ರೋಫಿ ಹಿಡಿದು ಹನುಮಂತ ಜೊತೆ ಧನರಾಜ್ ಪೋಸ್ ಕೊಟ್ಟಿದ್ದಾರೆ. ದೋಸ್ತಾ ನೀ ಮಸ್ತಾ, ಗೆಲವು ನಿನ್ನದು.. ಖುಷಿ ನನ್ನದು. ಇದು ದೋಸ್ತಿ ಗೆಲುವು ದೋಸ್ತಾ ಎಂದಿದ್ದಾರೆ. ‘ಇರು ನೀ ಜೊತೆಗಿರು ಎಂದೆಂದಿಗೂ’ ಎಂದು ಧನರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಒಟ್ನಲ್ಲಿ ಹನುಮಂತ ಗೆಲುವು ಧನರಾಜ್ ಸಖತ್ ಖುಷಿಯಾಗಿರೋದಂತೂ ಗ್ಯಾರಂಟಿ. ಶೋ ಮುಗಿದ ಮೇಲೆಯೂ ಆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಇದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.