ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಗೆಲುವಿನ ಮೆಟ್ಟಿಲೇರಲು ಕಾತುರದಿಂದ ಕಾಯುತ್ತಿದ್ದ Top-5 ಪೈಕಿ ರಗಡ್ ರಘು ಮನೆಯಿಂದ ಹೊರಬಂದಿದ್ದಾರೆ. ಟೈಟಲ್ ವಿನ್ನಿಂಗ್ ಸನಿಹದಲ್ಲೇ ರಘು ಹೊರಬಂದಿದ್ದು, ಮನೆಯೊಳಗೆ ಪಟಾಕಿ ಹುಡ್ಗಿ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಹಾಗೂ ಗಿಲ್ಲಿ ಉಳಿದುಕೊಂಡಿದ್ದಾರೆ.
ಸೀಸನ್ 12 ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಘು ಕೊನೇ ಕ್ಷಣದಲ್ಲಿ ಮನೆಯಿಂದ ಹೊರಬಂದಿದ್ದಾರೆ. 4ನೇ ರನ್ನರ್‌ಅಪ್ ಆದ ರಘುಗೆ 3.50 ಲಕ್ಷ ಬಹುಮಾನ ಕೂಡ ಸಿಕ್ಕಿದೆ. ಇದನ್ನೂ ಓದಿ: ಗಿಲ್ಲಿ ಅಣ್ಣ ನನ್ನ ಫೇವರಿಟ್, ಅವನೇ ಗೆಲ್ತಾನೆ: ಬಿಗ್ ಬಾಸ್ 11 ವಿನ್ನರ್ ಹನುಮಂತ ಮಾತು

ಎಲಿಮಿನೇಷನ್ ನಡೆದಿದ್ದು ಹೇಗೆ?
ಟಾಪ್-5 ಸ್ಪರ್ಧಿ ಎಲಿಮಿನೇಷನ್ ವಿಶೇಷವಾಗಿತ್ತು. ಬಿಗ್ ಬಾಸ್ ಇತಿಹಾಸದಲ್ಲೇ ಚೊಚ್ಚಲ ಮಹಿಳಾ ವಿಜೇತೆ ಆಗಿರುವ ನಟಿ ಶೃತಿ ವೇದಿಕೆಗೆ ಬಂದಿದ್ದರು. ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ರು. ಇದರಲ್ಲಿ ಒಂದು ಟಾಸ್ಕ್ ಕೂಡ ಇತ್ತು. ಪ್ರತಿಯೊಬ್ಬ ಸ್ಪರ್ಧಿಯ ಎದುರಿಗೂ ಒಂದು ಗ್ಲಾಸ್‌ನಲ್ಲಿ ಬಿಸಿ ನೀರು ಮತ್ತೊಂದು ಗಾಜಿನ ಬೌಲ್‌ನಲ್ಲಿ ಸ್ಮೋಕ್ ಉಂಟುಮಾಡುವ ಪೌಡರ್ ಇಡಲಾಗಿತ್ತು. ಅದರೊಳಗೆ ಬಿಸಿನೀರು ಹಾಕುತ್ತಿದ್ದಂತೆ ವಿವಿಧ ಬಣ್ಣಗಳು ಹೊಮ್ಮಿದವು. ಕೊನೆಯಲ್ಲಿ ಯಾರ ಬೌಲ್‌ನಲ್ಲಿ ರೆಡ್‌ಲೈಟ್ ಬರುತ್ತದೋ ಅವರು ಎಲಿಮಿನೇಟ್ ಎಂದರ್ಥ. ಅವರು ನನ್ನೊಟ್ಟಿಗೆ ಬರಬೇಕು ಅಂತ ಶೃತಿ ಹೇಳಿದ್ರು. ಅದರಂತೆ ರಘು ಅವರ ಮುಂದಿದ್ದ ಬೌಲ್‌ನಲ್ಲಿ ರೆಡ್ ಸಿಗ್ನಲ್ ಬರುತ್ತಿದ್ದಂತೆ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲಾಯಿತು.
6 ಸ್ಪರ್ಧಿಗಳಾದ ಗಿಲ್ಲಿ, ಅಶ್ವಿನಿ, ಕಾವ್ಯ, ರಕ್ಷಿತಾ, ಧನುಷ್ ಹಾಗೂ ರಘು ಫೈನಲ್‌ಗೆ ಎಂಟ್ರಿಕೊಟ್ಟಿದ್ದರು. ಆದ್ರೆ ಟಾಪ್-4ನೇ ರನ್ನರ್ ಅಪ್ ಆಗಿ ರಘು ಆಚೆ ಬಂದಿದ್ದಾರೆ. ಇನ್ನೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಎಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಗಿಲ್ಲಿ ನಟ ಗೆಲ್ಲುವ ಫೇವ್‌ರೆಟ್ ಆಗಿದ್ದಾರೆ. ಇದನ್ನೂ ಓದಿ: BBK 12 | Top-5 ಪಟ್ಟದಿಂದ ಔಟ್ – ಗ್ರ್ಯಾಂಡ್ ಫಿನಾಲೆಯಿಂದ ಹೊರಬಂದ ಧನುಷ್

