‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಆರಂಭದಿಂದಲೂ ಗಿಲ್ಲಿ ನಟನ ಬೆಸ್ಟ್‌ಫ್ರೆಂಡ್ ಆಗಿ ಗುರುತಿಸಿಕೊಂಡಿದ್ದ ಕಾವ್ಯ ಶೈವ ಟೈಟಲ್ ವಿನ್ನಿಂಗ್ ಸನಿಹದಲ್ಲೇ ಮನೆಯಿಂದ ಹೊರಬಂದಿದ್ದಾರೆ.
‘ಬಿಗ್ ಬಾಸ್ ಕನ್ನಡ 12 ಗ್ರ್ಯಾಂಡ್ ಫಿನಾಲೆ’ ಅದ್ಧೂರಿಯಾಗಿ ನಡೆಯುತ್ತಿದ್ದು, ಇನ್ನೇನು ಮುಕ್ತಾಯ ಹಂತ ತಲುಪಿದೆ. ಎಲಿಮಿನೇಟ್ ಆಗಿರೋ ಸ್ಪರ್ಧಿಗಳ ಡ್ಯಾನ್ಸ್, ಸಾಂಗ್ ಸಂಭ್ರಮದ ಜೊತೆಗೆ ಟೆನ್ಶನ್ ಕೂಡ ಹೆಚ್ಚಿದೆ. ಈ ನಡುವೆ 3ನೇ ರನ್ನರ್ ಅಪ್ ಆಗಿ ಕ್ಯಾವ್ಯ ಶೈವ ಮನೆಯಿಂದ ಹೊರಬಂದಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಈ ಎಲಿಮಿನೇಷನ್ ರೌಂಡ್ ನಡೆಸಿಕೊಟ್ಟರು.
ಬಿಗ್ ಮನೆಯಿಂದ ಹೊರ ಬಂದ 4ನೇ ರನ್ನರ್ ಅಪ್ ಆಗಿ ಹೊರ ಬಂದ ರಘುಗೆ ಇಬ್ಬರು ಪ್ರಾಯೋಜಕರಿಂದ 3.50 ಲಕ್ಷ ರೂ. ಬಹುಮಾನ ಸಿಕ್ಕರೇ, ಕಾವ್ಯ ಶೈವಗೆ 10 ಲಕ್ಷ ರೂ. ಬಹುಮಾನ ಸಿಕ್ಕಿತು.
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಗೆ ಗಿಲ್ಲಿ, ಅಶ್ವಿನಿ, ಕಾವ್ಯ, ರಕ್ಷಿತಾ, ಧನುಷ್ ಹಾಗೂ ರಘು ಎಂಟ್ರಿಕೊಟ್ಟಿದ್ದರು. ಆದ್ರೆ ಟಾಪ್-3ನೇ ರನ್ನರ್ ಅಪ್ ಆಗಿ ಕಾವ್ಯ ಆಚೆ ಬಂದಿದ್ದಾರೆ. ಇನ್ನೂ ಈ ಬಾರಿಯ ಟೈಟಲ್ ವಿನ್ನರ್ ಪ್ರಕಟಿಸಲು ಕ್ಷಣಗಣನೆ ಶುರುವಾಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಗಿಲ್ಲಿ ನಟ ಗೆಲ್ಲುವ ಫೇವ್‌ರೆಟ್ ಆಗಿದ್ದಾರೆ.


