ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ (Maha Kumbh Mela 2025) ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಕುಂಭ ಮೇಳದಲ್ಲಿ ಜನ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗ ‘ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್ (Saanya Iyer) ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾನ್ಯ ಪೋಸ್ಟ್‌ನಲ್ಲಿ, ಸಂಗಮದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವು ನನ್ನ ಅಂತರಂಗದಲ್ಲಿ ಹಲವು ವಿಷಯಗಳನ್ನು ಕಲಿಸಿದೆ. ನನಗೆ ಪುನರ್ಜನ್ಮವಲ್ಲದೆ ಬೇರೇನೂ ಅಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮುಂದಿನ ಹೊಸ ಪ್ರಯಾಣಕ್ಕಾಗಿ ನನ್ನ ಎಲ್ಲಾ ಪಿತೃಗಳು, ಪೂರ್ವಜರಿಂದ ಆಶೀರ್ವಾದವನ್ನು ಪಡೆದಿದ್ದೇನೆ.
View this post on Instagram
ನಾವೆಲ್ಲರೂ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು.ನೀವು ನಿಜವಾಗಿಯೂ ಯಾರೆಂದು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಭೂಮಿಯ ಮೇಲಿನ ನಿಮ್ಮ ಉದ್ದೇಶವು ಈಡೇರಲಿ. ಲೋಕ ಸಮಸ್ತಃ ಸುಖಿನೋ ಭವತು ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ‘ಬಿಗ್ ಬಾಸ್ ಕನ್ನಡ 9’ರ ಸ್ಪರ್ಧಿಯಾಗಿ ಸಾನ್ಯ ಗುರುತಿಸಿಕೊಂಡಿದ್ದಾರೆ. ‘ಗೌರಿ’ (Gowri) ಎಂಬ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್‌ಗೆ ಅವರು ನಾಯಕಿಯಾಗಿ ನಟಿಸಿದ್ದರು.