ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

Public TV
1 Min Read
shamanth gowda 1 1

‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಬ್ರೋ ಗೌಡ (Shamanth Bro Gowda) ಅವರು ಇಂದು (ಮೇ 18) ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೇಘನಾ (Meghana) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

shamanthಪ್ರೀತಿಸಿದ ಹುಡುಗಿ ಮೇಘನಾಗೆ ಖುಷಿ ಖುಷಿಯಾಗಿ ಶಮಂತ್ ತಾಳಿ ಕಟ್ಟುತ್ತಿರುವ ಫೋಟೋ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

shamanth gowda 3 1ನಿನ್ನೆ ರಾತ್ರಿ ನಡೆದ ಆರತಕ್ಷತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್, ಬಿಗ್ ಬಾಸ್ ನವಾಜ್, ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಿಮ್ಮದು ಕೋಳಿ ಕಾಲುಗಳು- ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ

shamanth gowda

ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

shamanth gowda 5

ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.

‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

Share This Article