‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್ (Deepika Das) ಹೊಸ ಫೋಟೋಶೂಟ್‌ವೊಂದರಲ್ಲಿ ಮಿಂಚಿದ್ದಾರೆ. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಖತ್ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬಿಗ್ ಬಾಸ್’ ಬೆಡಗಿಯ ಫೋಟೋ ಕಂಡು ಪಡ್ಡೆಹೈಕ್ಳು ಫಿದಾ ಆಗಿದ್ದಾರೆ.
ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ನಟಿ ದೀಪಿಕಾ ದಾಸ್ ಸದ್ದು ಮಾಡುತ್ತಲೇ ಇರುತ್ತಾರೆ. ಗುಲಾಬಿ ಬಣ್ಣದ ಧಿರಿಸಿನಲ್ಲಿ ನಟಿ ಮಿಂಚಿದ್ದಾರೆ.
ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ವಿವಿಧ ಭಂಗಿಯಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ‘ಸೌಂದರ್ಯ ಸಮರ ಸೋತವನೇ ಅಮರ’ ಎಂದೆಲ್ಲಾ ನಟಿಗೆ ಬಣ್ಣಿಸಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ ಮಾರ್ಚ್ 1ರಂದು ಉದ್ಯಮಿ ದೀಪಕ್ ಜೊತೆ ದೀಪಿಕಾ ದಾಸ್ ಮದುವೆಯಾದರು. ಗುರುಹಿರಿಯರ ಒಪ್ಪಿಗೆ ಪಡೆದು ಪ್ರೀತಿಸಿದ ಹುಡುಗನ ಜೊತೆ ಗೋವಾದಲ್ಲಿ ನಟಿ ಹಸೆಮಣೆ (Wedding) ಏರಿದರು. ಇದನ್ನೂ ಓದಿ:ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್
ನಟಿಯ ಸಿನಿಮಾ ಕನಸಿಗೆ ಪತಿ ದೀಪಕ್ (Deepak) ಜೊತೆಯಾಗಿ ನಿಂತಿದ್ದಾರೆ. ನಟನಾ ಕ್ಷೇತ್ರದಲ್ಲಿ ಮುಂದುವರಿಯಲು ದೀಪಿಕಾಗೆ ದೀಪಕ್ ಮತ್ತಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್
ಈ ವರ್ಷ ‘ಪಾರು ಪಾರ್ವತಿ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಿದರು. ಆ ನಂತರ ಒಟಿಟಿಯಲ್ಲೂ ಸಿನಿಮಾ ರಿಲೀಸ್ ಆಯ್ತು.
ನಾಗಿಣಿ ಸೀರಿಯಲ್, ಶೈನ್ ಶೆಟ್ಟಿ (Shine Shetty) ಗೆದ್ದಿದ್ದ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ (Bigg Boss Kannada 7) ದೀಪಿಕಾ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ 9ರಲ್ಲೂ ಭಾಗವಹಿಸಿದ್ದರು. 2 ಸೀಸನ್‌ನಲ್ಲೂ ಟಾಪ್ ಫೈನಲಿಸ್ಟ್ ಆಗಿದ್ರು. 2 ಬಾರಿಯೂ ಬಿಗ್ ಬಾಸ್ ಗೆಲುವಿನ ಪಟ್ಟ ಮಿಸ್ ಆಗಿತ್ತು.
ಕನ್ನಡದ ಜೊತೆ ತಮಿಳಿನಲ್ಲೂ ದೀಪಿಕಾ ದಾಸ್ ನಟಿಸಿ ಬಂದಿದ್ದಾರೆ. ಆದರೆ ಕನ್ನಡ ಕಿರುತೆರೆ ಅವರಿಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.