ಬಿಗ್‌ಬಾಸ್ (Bigg Boss Kannada) ಸೀಸನ್ 12ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಸೆ.28ಕ್ಕೆ ಗ್ರ್ಯಾಂಡ್ ಓಪನಿಂಗ್ ಆಗಲಿರುವ ಈ ಬಾರಿಯ ಬಿಗ್‌ಬಾಸ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಬಿಗ್‌ಬಾಸ್ ಅನೌನ್ಸ್ ಆಗುವ ಮುಂಚೆಯಿಂದಲೇ ಸಾಕಷ್ಟು ಸೆಲಬ್ರಿಟಿಗಳು, ಯೂಟ್ಯೂಬರ್ಸ್, ಸೀರಿಯಲ್ ಕಲಾವಿದರ ಹೆಸರುಗಳು ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಆದ್ರೆ ಅಧಿಕೃತವಾಗಿ ಯಾವುದು ಪಕ್ಕಾ ಆಗಿಲ್ಲ. ಇದೇ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಅವರ ಹೆಸರು ಕೂಡಾ ಕೇಳಿಬಂದಿತ್ತು.
ಕಿರುತೆರೆ ಹಾಗೂ ಹಿರಿತೆರೆ ಮೂಲಕ ಖ್ಯಾತಿ ಪಡೆದಿರುವ ನಟಿ ಮೇಘಾ ಶೆಟ್ಟಿ ಈ ಬಾರಿಯ ಬಿಗ್‌ಬಾಸ್ ಮನೆಗೆ ಹೋಗುತ್ತಾರೆ. ಅವರೇ ಮೊದಲ ಸ್ಪರ್ಧಿಯಾಗಿರುತ್ತಾರೆ ಅಂತೆಲ್ಲ ಹಬ್ಬಿಸಲಾಗಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಗ್ಲ್ಯಾಮರ್ ಗೊಂಬೆ ನಟಿ ಮೇಘಾ ಶೆಟ್ಟಿ ತೆರೆ ಎಳೆದಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ಗೆ ನಾನು ಹೋಗುವುದಿಲ್ಲ. ದಯವಿಟ್ಟು ಗಾಳಿಸುದ್ದಿ ಹಬ್ಬಿಸುವುದನ್ನ ನಿಲ್ಲಿಸಿ ಎಂದು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್
ಮೇಘಾ ಶೆಟ್ಟಿ ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದು ನಂತರ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ನಿರ್ಮಾಣ ಮಾಡುವ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹಬ್ಬಿದ್ದ ಬಿಗ್‌ಬಾಸ್ ಮನೆಯ ಸ್ಟೋರಿಗೆ ಇತಿಶ್ರೀ ಹಾಡಿದ್ದಾರೆ. ನಟಿ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಟ್ರೈಲರ್ ಲಾಂಚ್‌ಗೆ ದಿನಾಂಕ, ಸಮಯ ಫಿಕ್ಸ್ – ಹೊಂಬಾಳೆ ಫಿಲ್ಮ್ಸ್ಅಧಿಕೃತ ಮಾಹಿತಿ