ಬೆಂಗಳೂರು: ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ (Gilli Nata) ಹೆಸರು ಕೇಳಿ ಬರುತ್ತಿದೆ. ಯಾರೇ ಗೆದ್ದರೂ ಅದನ್ನ ಸ್ಪರ್ಧಾ ಮನೋಭಾವನೆಯಿಂದ ಸ್ವೀಕರಿಸಿ ಎಂದು ನಟ ಜಿಮ್ ರವಿ (Gym Ravi) ಹೇಳಿದ್ದಾರೆ.
ಇಂದು ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಗ್ರ್ಯಾಂಡ್ ಫಿನಾಲೆ ಹಿನ್ನೆಲೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕನ್ನಡಿಗರಿಗೆ, ಕನ್ನಡ ಜನತೆಗೆ ಧನ್ಯವಾದ. 37 ಕೋಟಿ ವೋಟ್ ಮಾಡಿದ್ದೀರಿ. ಕನ್ನಡ ಜನತೆ ಅವರೆಲ್ಲರಿಗೂ ಪ್ರೀತಿ ಕೊಟ್ಟಿದ್ದೀರಾ. ಅವರಿಗೆ ಪಬ್ಲಿಕ್ ಟಿವಿ ಮೂಲಕ ಹೃದಯಪೂರ್ವಕ ಧನ್ಯವಾದ. ಟಾಪ್-6ನಲ್ಲಿರುವ ಎಲ್ಲರೂ ಚನಾಗಿ ಆಡುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಗ್ ಬಾಸ್ ಸಾಕಷ್ಟು ಹೆಸರು ಮಾಡುತ್ತಿದೆ. ಗಿಲ್ಲಿ ನಮ್ಮನೆ ಹುಡುಗನ ಥರ ಅನಿಸುತ್ತಾನೆ. ಗಿಲ್ಲಿ ಈ ಮಟ್ಟಕ್ಕೆ ಬೆಳೆಯಲು ಅಲ್ಲಿರೋ ಎಲ್ಲಾ ಸ್ಪರ್ಧಿಗಳ ಸಪೋರ್ಟ್ ಇದೆ ಎಂದರು. ಇದನ್ನೂ ಓದಿ: ಗಿಲ್ಲಿ ನಟನೇ ಬಿಗ್‌ಬಾಸ್ ಗೆದ್ದು ಬರಲಿ – ಶಾಸಕ ನಂಜೇಗೌಡ ಶುಭಹಾರೈಕೆ
ಗಿಲ್ಲಿ ಗೆದ್ದು ಬಂದ್ರೆ ಜನರ ತೀರ್ಮಾನ, ಜನರ ಪ್ರೀತಿಗೆ ಮುಂದಿನ ದಿನದಲ್ಲಿ ಎಚ್ಚರಿಕೆ ಇಂದ ಹೆಜ್ಜೆ ಇಡಬೇಕು. ಸುದೀಪ್ ಸರ್ ಚೆನ್ನಾಗಿ ನಡೆಸಿಕೊಟ್ಟಿದ್ದಾರೆ. ಅವರಿಗೂ ಧನ್ಯವಾದಗಳು. ತುಂಬಾ ಕ್ರೇಜ್ ಇದೆ. ಬಿಗ್ ಬಾಸ್ ಸ್ಕ್ರಿಪ್ಟ್ ಅದು ಇದು ಏನೆಲ್ಲಾ ಮಾತನಾಡುತ್ತಾರೆ ಅದೆಲ್ಲ ಏನೂ ಇಲ್ಲ. ಬಿಗ್ ಬಾಸ್ ಅನ್ನೋದು ಒಂದು ಅದ್ಭುತ ಗೇಮ್. ಬಿಗ್ ಬಾಸ್‌ನಲ್ಲಿ ರೆಕಮೆಂಡೇಷನ್ ನಡಿಯಲ್ಲ. ಗೆಲ್ಲಲು ವೋಟಿಂಗ್ ಜೊತೆಗೆ ಆಟ, ವ್ಯಕ್ತಿತ್ವ ಎಲ್ಲವೂ ಲೆಕ್ಕಕ್ಕೆ ಬರುತ್ತೆ. ಹಿಂದೆ ರಾಮಾಯಣ, ಮಹಾಭಾರತ ನೋಡ್ತಿದ್ದೆ, ಆದ್ರೆ ಈಗ ಬಿಗ್ ಬಾಸ್ ಆ ಕ್ರೇಜ್ ಕ್ರಿಯೇಟ್ ಮಾಡಿದೆ. ಬಿಗ್ ಬಾಸ್ ಮನೆಗೆ ಹೋಗೋರು ಅದೃಷ್ಟವಂತರು ಎಂದು ಹೇಳಿದರು. ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ಗೊತ್ತಾಗುತ್ತೆ: ಸುದೀಪ್
ನಮ್ಮ ವೈಫ್ ಗಿಲ್ಲಿ ಗೆಲ್ತಾನೆ ಅಂತಾ ಎರಡನೇ ವಾರಕ್ಕೆ ಹೇಳಿದ್ದರು. ಈ ಸೀಸನ್ ಬಿಗ್ ಬಾಸ್‌ಗೆ ಹ್ಯಾಟ್ಸಾಫ್. ಚುನಾವಣೆ ರೀತಿ ಬಿಗ್ ಬಾಸ್‌ಗೆ ಪ್ರತಿಕ್ರಿಯೆ ಬರುತ್ತಿದೆ. ನೀವೆಲ್ಲರೂ ಈಗಾಗಲೇ ಗೆದ್ದಿದ್ದೀರಾ, ಸೋತವರು ಧೃತಿಗೆಡಬಾರದು. ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಹಾರೈಸಿದರು. ಇದನ್ನೂ ಓದಿ: Bigg Boss: 12ರ ಗ್ರ‍್ಯಾಂಡ್ ಫಿನಾಲೆಗೆ ಕೌಂಟ್‌ಡೌನ್; ಯಾರಾಗ್ತಾರೆ ಬಿಗ್ ಬಾಸ್ 12ರ ವಿನ್ನರ್?

