ಬಿಗ್ಬಾಸ್ ಕನ್ನಡ ಸೀಸನ್ 12ರ (BBK 12) ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿವೆ. ದಿನಗಳೆದಂತೆ ಮನೆಯಲ್ಲಿ ಮೋಜು, ಮಸ್ತಿ ಜೊತೆಜೊತೆಗೆ ಟೆನ್ಷನ್ ಕೂಡ ಜಾಸ್ತಿಯಾಗಿದೆ.
ಕಳೆದು ಒಂದು ವಾರದಿಂದ ಮನೆಯಲ್ಲಿನ ಸದಸ್ಯರು ಕುಟುಂಬಸ್ಥರನ್ನು ಕಂಡು ಸಂಭ್ರಮ, ಸಡಗರದಲ್ಲಿದ್ದರು. ಅದಾದ ಬಳಿಕವೇ ಬಿಗ್‌ಬಾಸ್ (Bigg Boss) ಕೂಡ ಈ ವಾರ ಡಬಲ್ ಎಲಿಮಿನೇಷನ್ ಇದೆ ಎಂದು ಶಾಕ್ ನೀಡಿದ್ದರು. ಅದರಂತೆ ಶನಿವಾರದ ಎಪಿಸೋಡ್‌ನಲ್ಲಿ ಸೂರಜ್ ಮನೆಯಿಂದ ಹೊರಹೋಗಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಕಾವು ಜೋರಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗದಿದ್ದರೇ ಸಾಕು ಎನ್ನುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಅಕ್ರಮ ಒತ್ತುವರಿ ತೆರವು ಸ್ಥಳಕ್ಕೆ ಕೇರಳ ಎಂಪಿ, ಎಂಎಲ್‌ಎಗಳ ಭೇಟಿ
ಸ್ಪಂದನಾ Vs ಮಾಳು; ಹೋಗೋರು ಯಾರು?
ಬಿಗ್ ಬಾಸ್ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/wPiT6tibuE
— Colors Kannada (@ColorsKannada) December 28, 2025
ಹೌದು, ವಾಹಿನಿ ಇದೀಗ ಪ್ರೋಮೋವೊಂದನ್ನು ರಿಲೀಸ್ ಮಾಡಿದೆ. ಸ್ಪಂದನಾ ಹಾಗೂ ಮಾಳು ಇಬ್ಬರ ಪೈಕಿ ಒಬ್ಬರು ಈಗ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗುತ್ತಾರೆ ಎಂದು ಬಿಗ್‌ಬಾಸ್ ತಿಳಿಸುತ್ತಾರೆ. ಈ ವೇಳೆ ಕಾರಣಕೊಟ್ಟ ಗಿಲ್ಲಿ, ಸ್ಪಂದನಾ ಯಾರು? ಸ್ಪಂದನಾ ಅಂದ್ರೆ ಏನು? ಎನ್ನುವ ಕ್ಲ್ಯಾರಿಟಿ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ. ಧನುಷ್ ಮಾತನಾಡಿ, ಮಾಳು ತನಗಾಗಿಯೇ ಸ್ಟ್ಯಾಂಡ್ ತೆಗೆದುಕೊಂಡಿಲ್ಲ… ಸ್ಪಂದನಾ ಮೊದಲಿನಿಂದಲೂ ಒಂದೇ ರೀತಿಯಾಗಿದ್ದಾರೆ ಎಂದು ಮನೆಯವರೆಲ್ಲರೂ ಕಾರಣ ಕೊಡುತ್ತಾರೆ.
ಈ ವೇಳೆ ಮನೆಗೆ ಬಂದ ಎರಡು ಕಾರುಗಳ ಪೈಕಿ ಒಂದು ಕಾರಿನಲ್ಲಿ ಮಾಳು ಹಾಗೂ ಇನ್ನೊಂದು ಕಾರಿನಲ್ಲಿ ಸ್ಪಂದನಾ ಕುಳಿತುಕೊಳ್ಳುತ್ತಾರೆ. ಈ ವೇಳೆ ಎರಡು ಕಾರುಗಳು ಮನೆಯಿಂದ ಆಚೆ ಹೋಗುತ್ತವೆ. ಬಳಿಕ ಮನೆಯೊಳಗೆ ಬರುವ ಒಂದು ಕಾರಿನಲ್ಲಿರುವ ಸದಸ್ಯ ಸೇಫ್ ಆಗುತ್ತಾರೆ. ಮೂಲಗಳ ಪ್ರಕಾರ, ಸ್ಪಂದನಾ ಮನೆಯಿಂದ ಆಚೆ ಹೋಗಿದ್ದಾರೆ ಎನ್ನಲಾಗಿದೆ.
ಈ ವಾರ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯುತ್ತಿದ್ದು, ಶನಿವಾರದ ಎಪಿಸೋಡ್‌ನಲ್ಲಿ (ಡಿ.28) ಸೂರಜ್ ಮನೆಯಿಂದ ಹೊರಹೋಗಿದ್ದಾರೆ. ಇದನ್ನೂ ಓದಿ: ಕಾರವಾರ ತೀರದಲ್ಲಿ ರಾಷ್ಟ್ರಪತಿ ಮುರ್ಮು ಸಬ್‌ಮೆರಿನ್ ಯಾನ




