ಬಿಗ್‌ಬಾಸ್ ಸೀಸನ್ ಕನ್ನಡ 12 ಮುಕ್ತಾಯಕ್ಕೆ ಇನ್ನು ಎರಡೇ ವಾರ ಬಾಕಿ ಇದೆ. ಈ ಹೊತ್ತಲ್ಲಿ ಹೆಚ್ಚಿನ ಅಭಿಪ್ರಾಯಗಳು ಗಿಲ್ಲಿಯೇ ಈ ಸೀಸನ್ ಗೆಲ್ಲೋ ಸ್ಪರ್ಧಿ ಎನ್ನುತ್ತಿವೆ. ಇದೀಗ ಮನೆಯಿಂದ ಹೊರ ಬಂದ ಸ್ಪರ್ಧಿ ಸ್ಪಂದನ ಸೋಮಣ್ಣ ಕೂಡ ಗಿಲ್ಲಿನಟ ಈ ಸೀಸನ್ ಗೆಲ್ಲುತ್ತಾರೆ ಎಂದಿದ್ದಾರೆ. ವೈಯಕ್ತಿಕವಾಗಿಯೂ ಗಿಲ್ಲಿಯೇ ಗೆಲ್ಲಬೇಕು ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ.
ಗಿಲ್ಲಿ ವ್ಯಕ್ತಿತ್ವವನ್ನ ಹಾಡಿ ಹೊಗಳಿದ ಸ್ಪಂದನ ಸೋಮಣ್ಣ, ಗಿಲ್ಲಿ ಬೆಸ್ಟ್ ಎಂಟರ್‌ಟೈನರ್ ಹಾಗೂ ಆಲ್‌ರೌಂಡರ್, ಅವರನ್ನು ಗಮನಿಸಿದ್ದೇನೆ. ಗಿಲ್ಲಿ ಬಿಟ್ರೆ ಧನುಶ್ ಗೆಲ್ಲಬೇಕು ಎಂಬ ಆಸೆ ಇದೆ. ಆದರೆ ಗೆಲ್ಲೋದು ಗಿಲ್ಲಿನೇ ಎಂದಿದ್ದಾರೆ.
ಗಿಲ್ಲಿಯ ಆಟದ ವೈಖರಿಯನ್ನ ಇಷ್ಟಪಟ್ಟ ಸ್ಪಂದನ, ಅವರು ನಾಮಿನೇಟ್ ಮಾಡಲು ಕೊಡುವ ಕಾರಣ, ಅವರ ಮಾತು ಸ್ಪಷ್ಟವಾಗಿರುತ್ತೆ. ಗಿಲ್ಲಿ ಚಾಕು ಚುಚ್ಚಿ ನಾಮಿನೇಟ್ ಮಾಡುವ ಟಾಸ್ಕ್ನಲ್ಲಂತೂ ಅವರು ನಾಮಿನೇಟ್ ಮಾಡಿದ್ದ ಸ್ಪರ್ಧಿಗೆ ಕಾರಣ ಕೊಟ್ಟಿದ್ದು ಉತ್ತಮವಾಗಿತ್ತು. ಅವರಲ್ಲಿ ಗೊಂದಲ ಇಲ್ಲ. ಸ್ಪಷ್ಟತೆ ಇದೆ ಎಂದು ಗಿಲ್ಲಿಯನ್ನ ಸ್ಪಂದನ ಹಾಡಿ ಹೊಗಳಿದ್ದಾರೆ. ಹೀಗಾಗಿ ಈ ಸೀಸನ್‌ನಲ್ಲಿ ಗಿಲ್ಲಿಯನ್ನ ಎಲ್ಲರೂ ಇಷ್ಟಪಡ್ತಾರೆ. ನನಗೂ ಗಿಲ್ಲಿಯೇ ಗೆಲ್ಲಬೇಕು ಅನ್ಸುತ್ತೆ ಎಂದು ಪಬ್ಲಿಕ್ ಟಿವಿ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

