ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಕನ್ನಡ ಮಾತಿನ ಬಗ್ಗೆ ಆಗಾಗ ಚರ್ಚೆ ಆಗುವುದು ಸಾಮಾನ್ಯ. ರಕ್ಷಿತಾಗೆ ಸರಿಯಾಗಿ ಮಾತನಾಡಲು ಬರುತ್ತೆ, ಆದರೆ ಅಟೆನ್ಷನ್‌ಗಾಗಿ ತಪ್ಪಾಗಿ ಮಾತನಾಡುತ್ತಾರೆ ಎಂಬ ಅರ್ಥದಲ್ಲಿ ಹಲವು ಸ್ಪರ್ಧಿಗಳು ಮಾತನಾಡಿದ್ದರು. ಇದೀಗ ಇನ್ನೋರ್ವ ಸ್ಪರ್ಧಿ ಧೃವಂತ್ ಕೂಡ ರಕ್ಷಿತಾ ಮಾತನಾಡುವ ರೀತಿಯ ಕುರಿತು ಕಾಮೆಂಟ್ ಮಾಡಿದ್ದಾರೆ. ರಕ್ಷಿತಾಗೆ ತುಳುವನ್ನೂ ಸರಿಯಾಗಿ ಮಾತನಾಡಲು ಬರೋದಿಲ್ಲ, ಕನ್ನಡ ಮಾತನಾಡಲೂ ಬರೋದಿಲ್ಲ, ಅವಳಿಗೆ ಕ್ಲೀನಾಗಿ ಮಾತನಾಡಲು ಬರುತ್ತದೆ. ಅವಳ ಗಿಮಿಕ್ ಸೆಲ್ಲಿಂಗ್ ಪಾಯಿಂಟೇ ಅವಳು ಮಾತನಾಡುವ ರೀತಿ. ಗೊತ್ತುಂಟಾ ಎಂದು ಅತಿಶಯೋಕ್ತಿ ಮಾಡುತ್ತಾರೆ ಎಂದಿದ್ದಾರೆ ಧ್ರುವಂತ್.
ಈ ಹಿಂದೆ ರಕ್ಷಿತಾ ಮಾತನಾಡುವ ಕುರಿತು ಅಶ್ವಿನಿ ಗೌಡ, ರಿಷಾ ಹಾಗೂ ಜಾನ್ವಿ, ಸುಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ರಕ್ಷಿತಾಗೆ ಸರಿಯಾಗಿ ಮಾತನಾಡಲು ಬರುತ್ತದೆ ಆದರೆ ಕಿಚ್ಚ ಸುದೀಪ್ ಎದುರು ಗಮನ ಸೆಳೆಯಲು ತಂತ್ರ ಮಾಡುತ್ತಾರೆ ಎಂದು ಕೆಲವು ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹೊರಹಾಕಿದ್ದರು. ಇದೀಗ ಧೃವಂತ್ ಕೂಡ ಬೆಡ್‌ರೂಂ ಏರಿಯಾದಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಜೊತೆ ಮಾತನಾಡಿದ್ದಾರೆ.
ಕಳೆದ ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ರಕ್ಷಿತಾ ಮಾತಿನ ಕುರಿತು ಕಿಚ್ಚ ಪ್ರಶ್ನೆ ಕೇಳಿದ್ದಾಗ ಸುಮ್ಮನೇ ಇದ್ದ ಧೃವಂತ್ ಇದೀಗ ಮತ್ತೆ ರಕ್ಷಿತಾ ಜಿಎಸ್‌ಪಿ (ಗಿಮಿಕ್ ಸೆಲ್ಲಿಂಗ್ ಪಾಯಿಂಟ್) ಉದ್ದೇಶದಿಂದ ತಪ್ಪು ತಪ್ಪಾಗಿ ಕನ್ನಡ ಮಾತನಾಡುತ್ತಾರೆ ಎಂದಿದ್ದಾರೆ. ಒಟ್ನಲ್ಲಿ ಇಡೀ ಮನೆಯಲ್ಲಿ ರಕ್ಷಿತಾ ಮಾತಿನದ್ದೇ ಚರ್ಚೆ ಜೋರಾಗಿದೆ.

