ಬಿಗ್‌ಬಾಸ್ ಸೀಸನ್ ಕನ್ನಡ 12ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಗೆಲುವಿನ ಮೆಟ್ಟಿಲೇರಲು ಕಾತುರದಿಂದ ಕಾಯುತ್ತಿದ್ದ Top-6 ಪೈಕಿ ಧನುಷ್ ಮನೆಯಿಂದ ಹೊರಬಂದಿದ್ದಾರೆ.
ಸೀಸನ್ 12ರ ಮೊದಲ ಫೈನ್‌ಲಿಸ್ಟ್ ಆಗಿದ್ದ ಧನುಷ್ Top-5 ಪಟ್ಟದಿಂದ ಔಟಾಗಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.
6 ಸ್ಪರ್ಧಿಗಳಾದ ಗಿಲ್ಲಿ, ಅಶ್ವಿನಿ, ಕಾವ್ಯ, ರಕ್ಷಿತಾ, ಧನುಷ್ ಹಾಗೂ ರಘು ಫೈನಲ್‌ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ಸ್ಪರ್ಧಿಗಳ ಪೈಕಿ ಧನುಷ್ 5th ರನ್ನರ್ ಅಪ್ ಆಗಿ ಆಚೆ ಬಂದಿದ್ದಾರೆ. ಇನ್ನೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಎಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಾನಾ ರೀತಿಯಲ್ಲಿ ತಮ್ಮ ಫೇವರಿಟ್ ಸ್ಪರ್ಧಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.

