ಬಿಗ್‌ಬಾಸ್‌ನ (Bigg Boss) ಈ ವಾರದ ಟಾಸ್ಕ್‌ನಲ್ಲಿ ಮಾಜಿ ಸ್ಪರ್ಧಿಗಳು ಹಾಗೂ 12ರ ಸ್ಪರ್ಧಿ ಗಿಲ್ಲಿ (Gilli) ನಡುವಿನ ಜಟಾಪಟಿ ಜೋರಾಗಿದೆ. ಈ ಮಧ್ಯೆ ಅಶ್ವಿನಿ ಗೌಡ (Ashwini Gowda) ಗಿಲ್ಲಿ ಬೆಂಬಲಕ್ಕೆ ನಿಂತಿದ್ದಾರೆ.
ಮಾಜಿ ಸ್ಪರ್ಧಿಗಳು ಬರುವ ಮುನ್ನ ಗಿಲ್ಲಿ ಹಾಗೂ ಅಶ್ವಿನಿ ಗೌಡ ಏಟಿಗೆ ಎದುರೇಟು ನೀಡುತ್ತಾ, ಪಕ್ಕಾ ಎದುರಾಳಿಗಳಂತೆ ಇದ್ದರು. ಆದರೆ ಈ ವಾರ ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಬರುತ್ತಿದ್ದಂತೆ ಅಶ್ವಿನಿ ಹಾಗೂ ಗಿಲ್ಲಿ ನಡುವಿನ ಸಂಬಂಧದ ನಡುವಳಿಕೆ ಕಂಪ್ಲೀಟ್ ಬದಲಾಗಿದೆ.ಇದನ್ನೂ ಓದಿ: ರಕ್ಷಿತಾ ಮದುವೆಯಾಗೋ ಹುಡುಗ ಹೇಗಿರಬೇಕು ಗೊತ್ತಾ?
ಮನೆಯವ್ರಿಗಾಗಿ ಸೈಲೆಂಟ್ ಆದ್ರಾ ಗಿಲ್ಲಿ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/OiHYcDKem9
— Colors Kannada (@ColorsKannada) November 27, 2025
ಇನ್ನೂ ಮಾಜಿ ಸ್ಪರ್ಧಿಗಳ ಎದುರು ಗಿಲ್ಲಿ ಹಾವಳಿ ಮಿತಿಮೀರಿದ್ದು, ರಜತ್, ಉಗ್ರಂ ಮಂಜು ಬೇಸತ್ತು ಹೋಗಿದ್ದಾರೆ. ಇದರಿಂದ ಗಿಲ್ಲಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗಿಲ್ಲಿ ನೀಡುವ ಕಿರಿಕಿರಿಯಿಂದಾಗಿ ಮಾಜಿ ಸ್ಪರ್ಧಿಗಳು ಟಿಪ್ಸ್ ನೀಡಲು ಹಿಂದೇಟು ಹಾಕುತ್ತಿದ್ದು, ಇನ್ನುಳಿದ ಸ್ಪರ್ಧಿಗಳು ಗಿಲ್ಲಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ವ್ಯವಸ್ಥಾಪಕ ಅಭಿಷೇಕ್ ಕೂಡ ಗಿಲ್ಲಿಗೆ ಕೈಮುಗಿದು ಸುಮ್ಮನೇ ಇರುವಂತೆ ಕೇಳಿಕೊಂಡಿದ್ದಾರೆ.
ಇದೆಲ್ಲದರ ನಡುವೆ ಅಶ್ವಿನಿ ಗೌಡ ಗಿಲ್ಲಿಗೆ ಇಲ್ಲಿ ಕೂತ್ಕೋ, ಆರಾಮಾಗಿರು, ಕೂಲ್ ಆಗಿರು. ಜಾಸ್ತಿ ತಲೆಕೆಡಿಸಿಕೊಳ್ಳಬೇಡ. ನಿನಗೆ ಹಿಂಸೆ ಆದರೆ ಹೇಳು, ನಾನು ನಿನ್ನ ಜೊತೆ ಬರ‍್ತೀನಿ ಎಂದು ಸಾಥ್ ನೀಡಿದ್ದಾರೆ. ಇನ್ನೂ ಬುಧವಾರದ ಎಪಿಸೋಡ್‌ನಲ್ಲಿ ಗಿಲ್ಲಿ ಮಾತನಾಡುತ್ತಾ, ಮಾಜಿ ಸ್ಪರ್ಧಿಗಳು ಬರುವ ಮುನ್ನ ಹೇಗಿದ್ದೆ. ನಾವೆಲ್ಲರೂ ಅಷ್ಟೇ ಇದ್ದಾಗ ನಮ್ಮ ನಡುವೆ ಜಗಳ ಆಗುತ್ತದೆ. ಆದರೆ ಹೊರಗಿನವರು ಬಂದಾಗ ನಮ್ಮ ಫ್ಯಾಮಿಲಿಗೆ ಏನು ಅನ್ನುತ್ತಿದ್ದಾರೆ ಎಂದು ಯೋಚಿಸುತ್ತೇವೆ ಎನ್ನುತ್ತಾರೆ. ಅದಕ್ಕೆ ಅಶ್ವಿನಿ ದನಿಗೂಡಿಸಿ, ಈಗಷ್ಟೇ ಅಲ್ಲ ಅವರು ಹೋದ ಮೇಲೆ ಈ ಪ್ರೀತಿ ಹೀಗೆ ಇರಬೇಕು ಎಂದು ಹೇಳುತ್ತಾರೆ.ಇದನ್ನೂ ಓದಿ:ಗಿಲ್ಲಿ ಕ್ವಾಟ್ಲೆಗೆ ‘ಉಗ್ರ’ ರೂಪ ತಾಳಿದ ಮಂಜು; ಸ್ಪರ್ಧಿಗಳಿಗೆ ಫುಲ್ ಕ್ಲಾಸ್

