‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ವಿಜೇತ ಹನುಮಂತ ಲಮಾಣಿ ಅವರು ‘ಬಿಗ್ ಬಾಸ್’ ಗೆಲುವಿನ ಬಗ್ಗೆ ಮಾಧ್ಯಮದೊಂದಿಗೆ ಸಂಭ್ರಮ ಹಂಚಿಕೊಂಡಿದ್ದಾರೆ. ನನ್ನ ಗೆಲುವಿಗೆ ಕರ್ನಾಟಕದ ಜನತೆ ಕಾರಣ ಎಂದು ಖುಷಿಯಿಂದ ಮಾತನಾಡಿದ್ದಾರೆ. ಈ ವೇಳೆ, ಗೆದ್ದ 50 ಲಕ್ಷ ಏನು ಮಾಡ್ತಾರೆ ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ:ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ
Advertisement
‘ಬಿಗ್ ಬಾಸ್’ ಶೋ ಗೆದ್ದ 50 ಲಕ್ಷ ರೂ.ನಲ್ಲಿ ಮನೆ ಕಟ್ಟಿಸುತ್ತೇನೆ. ಜೊತೆ ಮದುವೆ (Wedding) ಆಗುತ್ತೇನೆ. ನಮಗೆ ತಗಡಿನ ಮನೆಯಿದೆ ಅದನ್ನು ತೆಗೆಯಿಸಿ, ಸ್ಲ್ಯಾಬ್ ಮನೆ ಕಟ್ಟಿಸುತ್ತೇನೆ ಎಂದು ಹನುಮಂತ (Hanumantha) ಮಾತನಾಡಿದ್ದಾರೆ.
Advertisement
Advertisement
ಬರೋದು ಬಂದು ಬಿಟ್ಟಿದ್ದೇ, ಏನಾದರೂ ಆಗಲಿ ಅಂತ ನಿಂತುಬಿಟ್ಟಿದ್ದೆ. ಬರುವಾಗ ಬಂದೇ ಖಾಲಿ, ಹೋಗುವಾಗ ಖಾಲಿ, ಇರೋ ಮಟ ಜಾಲಿ ಜಾಲಿ ಎಂದು ಸುದ್ದಿಗೋಷ್ಠಿಯಲ್ಲಿ ಹನುಮಂತ ಹಾಡಿದ್ದಾರೆ. ಈ ಮೂಲಕ ಗೆಲುವಿಗಾಗಿ ತಾವು ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ನಾನು ಹೇಗೆ ಇದ್ದೆನೋ ಹಾಗೇ ಆಡಿದ್ದೇನೆ ಎಂದಿದ್ದಾರೆ.