‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಮಗನ ಗೆಲುವಿನ ಕುರಿತು ಖುಷಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಗೆಲ್ಲುತ್ತೇನೆ ಎಂದಿದ್ದ, ಗೆದ್ದೇ ಬಿಟ್ಟ ಎಂದು ಹನುಮಂತನ (Hanumantha) ತಾಯಿ ಶೀಲವ್ವ ಮಾತನಾಡಿದ್ದಾರೆ.
ಹನುಮಂತನ ತಾಯಿ ಮಾತನಾಡಿ, ಬಿಗ್ ಬಾಸ್ ಮನೆಗೆ ಹೋಗಿ ಎಲ್ಲರನ್ನೂ ನೋಡಿ ಖುಷಿಯಾಯ್ತು. ಹನುಮಂತ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾನೆ. ಬಹಳ ಖುಷಿಯಾಗಿದೆ. ಅಲ್ಲಿದ್ದ ಎಲ್ಲರೂ ನನ್ನ ಮಕ್ಕಳಂತೆ, ಯಾರು ಗೆದ್ದರು ನಮಗೆ ಖುಷಿನೇ ಎಂದಿದ್ದಾರೆ. ಇನ್ನೂ ಬಿಗ್ ಬಾಸ್‌ಗೆ ರೊಟ್ಟಿ ಕಟ್ಟಿಕೊಂಡು ಹೋಗಿ ಊಟ ಮಾಡಿಸಿ ಬಂದಿದ್ದು, ಬಹಳ ಖುಷಿಯಾಗಿತ್ತು. 3 ತಿಂಗಳು ಬಿಟ್ಟು ಇದ್ವಿ. ವೇದಿಕೆ ಮೇಲೆ ಮಗನನ್ನು ನೋಡಿ ಕಣ್ಣೀರು ಬಂತು. ಕರುನಾಡಿನ ಜನರು ನನ್ನ ಮಗನಿಗೆ ಆರ್ಶೀವಾದ ಮಾಡಿದ್ದಾರೆ.
ಹನುಮಂತನಿಗೆ ಹುಡುಗಿ ನೋಡುತ್ತಾ ಇದ್ದೇವೆ. ಅವನಿಗೆ ಅಕ್ಷತೆ ಕಾಳು ಹಾಕಿದರೆ ನಮ್ಮ ಆಸೆ ಪೂರ್ತಿ ಆಗುತ್ತದೆ. ಮಗನ ಮದುವೆಯನ್ನು ಮನೆ ಮುಂದೆಯೇ ಮಾಡುತ್ತೇವೆ. ಒಂದು ವೇಳೆ, ಹನುಮಂತ ಬಯಸಿದರೆ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುತ್ತೇವೆ. ಹನುಮಂತನ ಮದುವೆಗೆ ಸುದೀಪ್ ಸರ್‌ನ ಕರೆಯುತ್ತೇವೆ, ಅವರು ಬರಬೇಕು ಎಂದು ಆಸೆಯಿದೆ ಎಂದಿದ್ದಾರೆ.
ಆಗ ನಾವು ಹನುಮಂತನಿಗೆ ಹೊತ್ತಿಗೆ ತೆಗೆಸಿ ಹೆಸರಿಟ್ಟಿದ್ದೇವು. ದೇವರು ಅಂತ ನಾವೇನು ಒಂದೊತ್ತು ಉಪವಾಸನೂ ಮಾಡಲ್ಲ. ಹನುಮಂತ ಶನಿವಾರ ಜಳಕ ಮಾಡಿ ದೇವಸ್ಥಾನಕ್ಕೆ ಹೋಗ್ತಿದ್ದ, ಆಗ ಊಟ ಬಿಟ್ಟು ದೇವರ ಸೇವೆ ಮಾಡುತ್ತಿದ್ದ. ಅದರಿಂದಲೇ ಅವನು ಬಿಗ್ ಬಾಸ್ ಗೆದ್ದಿದ್ದು. ಇದರ ಬಗ್ಗೆ ಬಹಳ ಖುಷಿಯಿದೆ. ದೊಡ್ಡ ಮನೆ ಕಟ್ಟಿಸುವ ಆಸೆ ಅವನಿಗೆ ಇದೆ. ಮುಂದೆ ಹನುಮಂತು ಅವರ ಆಸೆಯಂತೆ ಮಾಡುತ್ತಾನೆ ಎಂದಿದ್ದಾರೆ.