ಮಚ್ಚು ಹಿಡಿದು ರೀಲ್ಸ್ ಮಾಡಿದ ಹಿನ್ನೆಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ (Vinay Gowda) ಹಾಗೂ ರಜತ್‌ರನ್ನು (Rajath) ಅರೆಸ್ಟ್ ಮಾಡಲಾಗಿದೆ. ಹಾಗಾಗಿ ಪ್ರಕರಣದ ಕುರಿತು ವಿನಯ್ ಸ್ಪಷ್ಟನೆ ನೀಡಿದ್ದಾರೆ. ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದು ವಿಡಿಯೋದಲ್ಲಿ ವಿನಯ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ರೀಲ್ಸ್‌ನಲ್ಲಿ ಹಿಡಿದ ಮಚ್ಚಿಗೂ ಪೊಲೀಸರ ವಶದಲ್ಲಿರೋ ಮಚ್ಚಿಗೂ ವ್ಯತ್ಯಾಸವಿದೆ. ಹಾಗಾಗಿ ಈ ಕುರಿತು ವಿನಯ್ ಮಾತನಾಡಿ, ನಾವು ನಿನ್ನೆ ಪೊಲೀಸ್ ಸ್ಟೇಷನ್‌ನಲ್ಲಿದ್ದಾಗ ಅವರು ತಂದಿರೋ ಲಾಂಗ್ ಎಕ್ಸ್‌ಚೇಂಜ್ ಆಗಿರಬಹುದು. ಇದರ ಬಗ್ಗೆ ನಮಗೆ ತಿಳಿದಿಲ್ಲ. ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶ ಇರಲಿಲ್ಲ. ಸೆಟ್‌ನಲ್ಲಿ ಸಾಕಷ್ಟು ಆ ರೀತಿ ಮಚ್ಚುಗಳಿರುತ್ತವೆ. ಇದನ್ನೂ ಓದಿ:ವಿನಯ್ ರೀಲ್ಸ್ ತಂದ ಆಪತ್ತು: ‘ಡೆವಿಲ್’ ಚಿತ್ರೀಕರಣಕ್ಕೆ ಮತ್ತೆ ತೊಂದರೆ?
ಪೊಲೀಸರಿಗೆ ಕೊಟ್ಟಿರೊ ಮಚ್ಚು ಬೇರೆ ಆಗಿರೋದು ನನಗೆ ಗೊತ್ತಿಲ್ಲ. ಇದರಲ್ಲಿ ತುಂಬಾ ಕನ್ಪ್ಯೂಷನ್ ಇದೆ. ರೀಲ್ಸ್ ವೇಳೆ, ರಜತ್ ಹಿಡಿದುಕೊಂಡಿದ್ದ ಮಚ್ಚಿನಲ್ಲೇ ನಾನು ರೀಲ್ಸ್ ಮಾಡಿದ್ದೇನೆ. ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿಲ್ಲ ಎಂದು ಆ ಕಾರಣಕ್ಕೆ ಈ ವಿಡಿಯೋ ಮಾಡ್ತಿರೋದಾಗಿ ವಿನಯ್ ಗೌಡ ಹೇಳಿಕೆ ನೀಡಿದ್ದಾರೆ.
ಇನ್ನೂ ಆರೋಪಿಗಳಾದ ವಿನಯ್ ಮತ್ತು ರಜತ್‌ರನ್ನು ರೀಲ್ಸ್ ಮಾಡಿದ ಜಾಗದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಇಂದೇ ಇಬ್ಬರು ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.