‘ಬಿಗ್ ಬಾಸ್ ಕನ್ನಡ 11ʼರ (Bigg Boss Kannada 11) ಶೋನಲ್ಲಿ ವಿನ್ನರ್ ಆಗಿ ಹನುಮಂತ ಗೆದ್ದು ಬೀಗಿದ್ದಾರೆ. ರನ್ನರ್ ಅಪ್ ಆಗಿರೋ ತ್ರಿವಿಕ್ರಮ್ ಅವರು ಹನುಮಂತನ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ಹನುಮಂತ (Hanumantha) ಟ್ರೋಫಿ ಗೆದ್ದಿರೋದು ಖುಷಿಯಿದೆ ಎಂದು ತ್ರಿವಿಕ್ರಮ್ ಮಾತನಾಡಿದ್ದಾರೆ.
ಹನುಮಂತು ಗೆದ್ದಿರೋದು ನನಗೆ ಖುಷಿ ಇದೆ. ಅವರು ಟ್ರೋಫಿ ಗೆದ್ದಿರೋದು ಖುಷಿಯಾಗಿದೆ. ನೀವು ತೋರಿಸಿರುವ ಪ್ರೀತಿಗೆ ಚಿರಋಣಿ ಆಗಿದ್ದೇನೆ. ಯುದ್ದದಲ್ಲಿ 100 ದಿನ ನಿಲ್ಲೋದು ಮುಖ್ಯ ಎಂದು ‘ಬಿಗ್ ಬಾಸ್ 11’ರ ರನ್ನರ್ ಅಪ್ ತ್ರಿವಿಕ್ರಮ್ ಮಾತನಾಡಿದ್ದಾರೆ. ಇದನ್ನೂ ಓದಿ:ಮಗನ ಕೊನೆ ಶೋ ನೋಡಲು ಬಿಗ್ ಬಾಸ್ ಮನೆಗೆ ಬಂದಿದ್ದ ಸುದೀಪ್ ತಂದೆ
ಇನ್ನೂ ತ್ರಿವಿಕ್ರಮ್ ಗೆದ್ದೆ ಗೆಲ್ಲುತ್ತಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ತ್ರಿವಿಕ್ರಮ್ ಫ್ಯಾನ್ಸ್‌ಗೆ ಈ ವಿಚಾರ ನಿರಾಸೆ ಆಗಿದೆ.