ಸ್ನೇಹಿತೆಯ ಅರಿಶಿನ ಶಾಸ್ತ್ರದಲ್ಲಿ ‘ಬಿಗ್‌ ಬಾಸ್’ ಮೋಕ್ಷಿತಾ ಮಿಂಚಿಂಗ್

Public TV
Public TV - Digital Head
1 Min Read

‘ಪಾರು’ ಸೀರಿಯಲ್ (Paaru Serial) ಖ್ಯಾತಿಯ ಮಾನ್ಸಿ ಜೋಶಿ (Mansi Joshi) ಅವರು ಇದೇ ಫೆ.16ರಂದು ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ರೆಸಾರ್ಟ್‌ವೊಂದರಲ್ಲಿ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ಜರುಗಿದೆ. ಈ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ (Bigg Boss Kannada 11) ಬೆಡಗಿ ಮೋಕ್ಷಿತಾ ಪೈ (Mokshitha Pai) ಕೂಡ ಭಾಗಿಯಾಗಿದ್ದಾರೆ.

ರಾಘವ್ ಜೊತೆ ಮಾನ್ಸಿ ಜೋಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಮಾನ್ಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ವರ ರಾಘವ್ ಹಳದಿ ಬಣ್ಣದ ಉಡುಗೆ ಧರಿಸಿದ್ದಾರೆ. ಸ್ನೇಹಿತೆ ಮಾನ್ಸಿ ಹಳದಿ ಶಾಸ್ತ್ರದಲ್ಲಿ ಮೋಕ್ಷಿತಾ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಳದಿ ಬಣ್ಣದ ಡ್ರೆಸ್ ಧರಿಸಿ, ಕೂದಲು ಕರ್ಲಿ ಮಾಡಿಸಿದ್ದಾರೆ. ಸ್ಟೈಲೀಶ್ ಆಗಿ ಮೋಕ್ಷಿತಾ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Mokshitha Pai (@mokshitha22)

ಇನ್ನೂ ಮೋಕ್ಷಿತಾ ಬಿಗ್ ಬಾಸ್‌ಗೆ (BBK 11) ಹೋಗಿದ್ದ ಸಂದರ್ಭದಲ್ಲಿ ಮಾನ್ಸಿ ನಿಶ್ಚಿತಾರ್ಥ ನಡೆದಿತ್ತು. ಆಗ ಮೋಕ್ಷಿತಾ ಅನುಪಸ್ಥಿತಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೀರಾ ಎಂದು ಸಿಕ್ಕಾಪಟ್ಟೆ ಮಾನ್ಸಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಮಾನ್ಸಿ ಅರಿಶಿನ ಸಂಭ್ರಮದಲ್ಲಿ ಮೋಕ್ಷಿತಾ ಭಾಗಿಯಾಗಿ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಫೆ.16ರಂದು ನಡೆಯಲಿರುವ ಮಾನ್ಸಿ ಮದುವೆಗೂ ಮೋಕ್ಷಿತಾಗೆ ಆಹ್ವಾನವಿದೆ. ಕಿರುತೆರೆ ನಟ ನಟಿಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

Share This Article