‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ಶೋಭಾ ಶೆಟ್ಟಿ (Shobha Shetty) ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಭಾವಿ ಪತಿಗೆ ರಿಂಗ್ ತೊಡಿಸಿದ ಫೋಟೋ ಶೇರ್ ಮಾಡಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ
ಇದೇ ದಿನಾಂಕ ಕಳೆದ ವರ್ಷ ಅವರು ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್ ಆಗಿದ್ದರು. ಇಂದಿಗೆ ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿದೆ. ಈ ಖುಷಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಹೇ ಪಾಪು ಮಾ, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವ. ನಾವು ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ. ಅಂತ್ಯವಿಲ್ಲದ ಪ್ರೀತಿ. ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಮೈ ಲವ್ ಎಂದು ಶೋಭಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್
ಮುದ್ದಾದ ಜೋಡಿ ಯಶವಂತ್ ರೆಡ್ಡಿ ಜೊತೆಗಿನ ಶೋಭಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭಕೋರಿದ್ದಾರೆ. ನೂರು ಕಾಲ ಜೊತೆಯಾಗಿ ಬಾಳಿ, ಮದುವೆ ಯಾವಾಗ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಕಾರ್ತಿಕ ದೀಪಂ, ಹಲವು ಶಾರ್ಟ್ ಫಿಲ್ಮ್ಂಗಳಲ್ಲಿ ಶೋಭಾ ಮತ್ತು ಯಶವಂತ್ ರೆಡ್ಡಿ ಜೊತೆಯಾಗಿ ನಟಿಸಿದ್ದಾರೆ. ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಸಮ್ಮತಿಯೂ ಇದೆ. ಸದ್ಯದಲ್ಲೇ ಈ ಜೋಡಿ ಕಡೆಯಿಂದ ಮದುವೆ ಡೇಟ್ ಬಗ್ಗೆ ಅಪ್‌ಡೇಟ್ ಸಿಗಲಿದೆ.