‘ಬಿಗ್ ಬಾಸ್’ ಖ್ಯಾತಿಯ ರಂಜಿತ್ (Ranjith) ಇಂದು (ಮೇ 11) ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮಾನಸ ಗೌಡ ಜೊತೆ ಇಂದು ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:Mother’s Day 2025: ಅಮ್ಮನ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್
ಮಾನಸ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ಇಂದು ಮದುವೆಯ ಮುದ್ರೆ ಒತ್ತಿದ್ದಾರೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಹೊನ್ನೇನಹಳ್ಳಿಯಲ್ಲಿ ರಂಜಿತ್ ಮದುವೆ ಜರುಗಿದೆ. ಈ ಜೋಡಿಗೆ ತುಕಾಲಿ ಸಂತೋಷ್ ಮತ್ತು ಮಾನಸಾ ದಂಪತಿ, ಗೋಲ್ಡ್ ಸುರೇಶ್, ಯಮುನಾ, ರಜತ್, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದಾರೆ.ಇದನ್ನೂ ಓದಿ:‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ
View this post on Instagram
ಮಾನಸ ಗೌಡ ಅವರು ಫ್ಯಾಷನ್ ಸ್ಟುಡಿಯೋ ಹೊಂದಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪರಿಚಿತರಾದ ಮಾನಸ ಜೊತೆ ರಂಜಿತ್‌ಗೆ ಲವ್ ಆಗಿತ್ತು. ಇದೀಗ ಇಬ್ಬರ ಪ್ರೀತಿ ಮದುವೆಗೆ ಮುನ್ನುಡಿ ಬರೆದಿದೆ.