ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ

akshita rajath

‘ಬಿಗ್ ಬಾಸ್’ ಖ್ಯಾತಿಯ ರಜತ್ (Rajath) ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಪತಿ ರಜತ್ ಬದಲು ಪತ್ನಿ ಅಕ್ಷಿತಾ (Akshita) ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ನಾನಿ ಜೊತೆ ಶ್ರೀನಿಧಿ ಶೆಟ್ಟಿ ರೊಮ್ಯಾನ್ಸ್- ‘ಹಿಟ್ 3’ ಸಾಂಗ್ ಔಟ್

ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ರಜತ್ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ರಜತ್ ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿರುವ ನಿಮಿತ್ತ ಪತ್ನಿ ಅಕ್ಷಿತಾ ವಿಚಾರಣೆ ಎದುರಿಸಿದ್ದಾರೆ. ರಜತ್‌ ಚಿತ್ರೀಕರಣದಲ್ಲಿ ಭಾಗಿಯಾಗಿರೋ ಹಿನ್ನೆಲೆ ಫೋನ್‌ ಸ್ವಿಚ್‌ ಆಫ್‌ ಆಗಿದೆ. ನಾಳೆ ಬೆಂಗಳೂರಿಗೆ ರಜತ್‌ ಆಗಮಿಸುತ್ತಿದ್ದು, ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ವಿಚಾರಣೆ ಎದುರಿಸಿ ಅಕ್ಷಿತಾ ತೆರಳಿದ್ದಾರೆ.

Vinay Gowda Rajath kishan

ಅಂದಹಾಗೆ, ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.