ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ರಜನ್‌ನನ್ನು (Rajath) ಮತ್ತೆ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಕೊನೆಯುಸಿರು ಇರೋವರೆಗೂ ಸುದೀಪ್ ಸರ್ ಋಣ ಮರೆಯೋದಿಲ್ಲ: ಲಾಂಗ್ ವಿವಾದದ ಬಗ್ಗೆ ವಿನಯ್ ಮಾತು
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಜತ್‌ಗೆ ಪೊಲೀಸರು ನೋಟಿಸ್ ನೀಡಿದ್ದರು. ರೀಲ್ಸ್‌ಗೆ ಬಳಸಿದ್ದ ಮಚ್ಚು ಸಿಗದ ಹಿನ್ನೆಲೆ 2 ಬಾರಿ ನೋಟಿಸ್ ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಗೆ ಗೈರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಕೋರ್ಟ್ ಎನ್‌ಬಿಡಬ್ಲ್ಯೂ ಜಾರಿ ಮಾಡಿತ್ತು. ಕೋರ್ಟ್ ಸೂಚನೆ ಮೇರೆಗೆ ರಜತ್‌ನನ್ನ ಬಂಧಿಸಲಾಗಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ‘ಹಿಟ್ಲರ್ ಕಲ್ಯಾಣ’ ನಟಿ
ರಜತ್ ಬಂಧನದ ಬೆನ್ನಲ್ಲೇ ವಿನಯ್ ಗೌಡ (Vinay Gowda) ಬಂಧನಕ್ಕೆ ಪೊಲೀಸರು ತೆರಳಿದ್ದಾರೆ. ಬಂಧಿಸಿದ ಬಳಿಕ ಇಂದೇ 24ನೇ ಎಸಿಎಂಎಂ ಕೋರ್ಟ್‌ಗೆ ಇಬ್ಬರನ್ನೂ ಪೊಲೀಸರು ಹಾಜರುಪಡಿಸಲಿದ್ದಾರೆ.
ನಾನು ಮನೆಯಲ್ಲಿಲ್ಲ: ವಿನಯ್ ಸ್ಪಷ್ಟನೆ
ಸದ್ಯ ಪೊಲೀಸರಿಂದ ಬಂಧನ ಭೀತಿ ಶುರುವಾಗುತ್ತಿದ್ದಂತೆ ವಿನಯ್ ಗೌಡ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಿನಿಮಾ ಚಿತ್ರೀಕರಣದಲ್ಲಿದ್ದೇನೆ, ನಿನ್ನೆ ನಾನು ಪೊಲೀಸ್ ಸ್ಟೇಷನ್‌ಗೆ ಹೋಗಿ ಬಂದಿದ್ದೇನೆ, ವಾರೆಂಟ್ ಜಾರಿಯಾಗಿರೋದು ನನಗೆ ಗೊತ್ತಿಲ್ಲ. ಸದ್ಯ ನಾನು ಮನೆಯಲ್ಲಿಲ್ಲ, ನನಗೆ ಯಾವುದೇ ಕರೆಯೂ ಬಂದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.