‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಸಂಚಲನ ಮೂಡಿಸಿದ ಸ್ಪರ್ಧಿ ಮೋಕ್ಷಿತಾ ಪೈ (Mokshitha Pai) ವೆಕೇಷನ್ ಮೂಡ್‌ನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಕೇರಳದ ವಯನಾಡುಗೆ (Wayanad) ನಟಿ ಭೇಟಿ ನೀಡಿದ್ದಾರೆ. ಇದರ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್’ ಶೋ ಆದ್ಮೇಲೆ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಕೇರಳದಲ್ಲಿನ ಸುಂದರ ಸ್ಥಳಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಫ್ರೆಂಡ್ಸ್ ಜೊತೆ ಟ್ರೆಕ್ಕಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್
ಇನ್ನೂ ಇತ್ತೀಚೆಗೆ ‘ಬಿಗ್ ಬಾಸ್’ ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಐಶ್ವರ್ಯಾ, ಅನುಷಾ ರೈ ಜೊತೆ ಮೋಕ್ಷಿತಾ ಕೂಡ ಭಾಗಿಯಾಗಿದ್ದರು. ನವಜೋಡಿಗೆ ಶುಭಕೋರಿ ಬಂದಿದ್ದರು. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ
ಇನ್ನೂ ಮೋಕ್ಷಿತಾ ‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕಪ್ಪು ಹುಡುಗಿಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದೆ. ಈ ಚಿತ್ರದ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
View this post on Instagram
ಇನ್ನೂ ‘ಪಾರು’ (Paaru Serial) ಸೀರಿಯಲ್ ಮೂಲಕ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಪಾರು ಆಗಿ ಕಿರುತೆರೆಯಲ್ಲಿ ಮನೆ ಮಾತಾದರು.