ನಟಿ ಮೋಕ್ಷಿತಾ ಪೈ (Mokshitha Pai) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ 11ರ ಶೋ (Bigg Boss Kannada 11) ಬಳಿಕ ಮತ್ತೆ ಕ್ಯಾಮೆರಾ ಮುಂದೆ ಮಿಂಚಲಿದ್ದಾರೆ. ಇದನ್ನೂ ಓದಿ:‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್
‘ಬಿಗ್ ಬಾಸ್ ಕನ್ನಡ 10’ರ ಖ್ಯಾತಿಯ ವಿನಯ್ ಗೌಡ (Vinay Gowda) ಜೊತೆ ವೆಬ್ ಸೀರೀಸ್ ನಾಯಕಿಯಾಗಿ ಮೋಕ್ಷಿತಾ ನಟಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಧೃತಿ ಕ್ರಿಯೇಷನ್ಸ್ನಲ್ಲಿ ಇದನ್ನು ನಿರ್ಮಾಣ ಮಾಡುತ್ತಿದೆ. ಜೀ5 ಒಟಿಟಿಯಲ್ಲಿ ಇದು ಪ್ರಸಾರವಾಗಲಿದೆ.
‘ಬಿಗ್ ಬಾಸ್’ ಬಳಿಕ ಕಾಣಿಸಿಕೊಳ್ಳುತ್ತಿರುವ ಮೊದಲ ಪ್ರಾಜೆಕ್ಟ್ ಇದಾಗಿದೆ. ಹೀಗಾಗಿ ವಿನಯ್ ಗೌಡ ಮತ್ತು ಮೋಕ್ಷಿತಾ ಜೋಡಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಇದನ್ನೂ ಓದಿ:ತಮ್ಮನ್ನಾರನ್ನ ವಿರೋಧಿಸುವುದಾದ್ರೆ ಅವರ ಸಿನಿಮಾಗಳನ್ನೂ ನೋಡಬೇಡಿ: ಮಧು ಬಂಗಾರಪ್ಪ
‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಸಿನಿಮಾದಲ್ಲಿ ಮೋಕ್ಷಿತಾ ಪೈ ನಟಿಸುತ್ತಿದ್ದು, ಈ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಪ್ಪು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೋಕ್ಷಿತಾ ಪಾತ್ರವೇ ಚಿತ್ರದ ಹೈಲೆಟ್ ಆಗಿದ್ದು, ಈ ಸಿನಿಮಾ ರಿಲೀಸ್ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡುವ ನಿರೀಕ್ಷೆ ಇದೆ.