‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಅದ್ಧೂರಿಯಾಗಿ ತೆರೆಬಿದ್ದಿದೆ. ‘ಬಿಗ್ ಬಾಸ್’ನ 3ನೇ ರನ್ನರ್ ಅಪ್ ಆಗಿರೋ ಮೋಕ್ಷಿತಾ ಪೈ (Mokshitha Pai) ಶೋ ಮುಗಿಯುತ್ತಿದ್ದಂತೆ ಚೊಚ್ಚಲ ಸಿನಿಮಾವನ್ನು ಅವರು ಘೋಷಿಸಿದ್ದಾರೆ. ‘ಮಿಡಲ್ ಕ್ಲಾಸ್ ರಾಮಾಯಣ’ (Middle Class Ramayana) ಹೇಳೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಶಿವಣ್ಣ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ಡಿಸಿಎಂ
ವಿನು ಗೌಡಗೆ ನಾಯಕಿಯಾಗಿ ‘ಮಿಡಲ್ ಕ್ಲಾಸ್ ರಾಮಾಯಣ’ ಚಿತ್ರದಲ್ಲಿ ಮೋಕ್ಷಿತಾ ನಟಿಸಿದ್ದಾರೆ. ಇದರ ಟೈಟಲ್ ಇಂದು (ಫೆ.8) ಅನಾವರಣ ಆಗಿದೆ. ಈ ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಸಿನಿಮಾದ ಹಾಡುಗಳ ಚಿತ್ರೀಕರಣ ಬಾಕಿಯಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಅವರು ಕಪ್ಪು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
- Advertisement3
View this post on Instagram
- Advertisement
‘ಮಿಡಲ್ ಕ್ಲಾಸ್’ ರಾಮಾಯಣ ಸಿನಿಮಾದಲ್ಲಿ ಕಪ್ಪು ಹುಡುಗಿಯಾಗಿ ಕಾಣಿಸಿಕೊಂಡಿರುವ ಮೋಕ್ಷಿತಾ ಲುಕ್ ಕೂಡ ರಿವೀಲ್ ಆಗಿದೆ. ನಟಿಯ ಹೊಸ ಪ್ರಯತ್ನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನೂ ಚಿತ್ರವನ್ನು ಧನುಷ್ ಗೌಡ ಅವರು ನಿರ್ದೇಶನ ಮಾಡಿದ್ದಾರೆ. ಜಯರಾಮ್ ಗಂಗಪ್ಪನಹಳ್ಳಿ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
ಇನ್ನೂ ‘ಪಾರು’ ಸೀರಿಯಲ್ ಮೂಲಕ ನಾಯಕಿಯಾಗಿ ಕಿರುತೆರೆಗೆ ಪ್ರವೇಶಿಸಿದ ಮೋಕ್ಷಿತಾ, ಹಳ್ಳಿ ಪಾತ್ರದಲ್ಲಿ ಮನೋಜ್ಞ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಬಳಿಕ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋನಲ್ಲಿ ಮೋಕ್ಷಿತಾ ಸ್ಪರ್ಧಿಸಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.