‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಸುರೇಶ್ ಇರುವ ವಿಡಿಯೋ ಇದೀಗ ವೈರಲ್ ಆಗಿದೆ. ದೊಡ್ಮನೆಯಲ್ಲಿರುವಾಗಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಿನ್ನೆಲೆ ಇದೀಗ ಅವರು ಆಪರೇಷನ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ:ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಒದ್ದಾಟ- ಆಸ್ಪತ್ರೆಗೆ ದಾಖಲು
Advertisement
ಗೋಲ್ಡ್ ಸುರೇಶ್ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್‌ನಲ್ಲಿದ್ದಾಗ ಟಾಸ್ಕ್ ನಿರ್ವಹಿಸುವ ಸಮಯದಲ್ಲಿ ಗೋಲ್ಡ್ ಸುರೇಶ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಡ್ರಮ್ ತುಂಬಾ ನೀರು ತುಂಬಿಸಿ ಅದನ್ನು ಹೊರಚೆಲ್ಲದಂತೆ ನೋಡಿಕೊಳ್ಳುವ ಟಾಸ್ಕ್‌ನಲ್ಲಿ ಸುರೇಶ್ ಕಾಲಿಗೆ ಪೆಟ್ಟಾಗಿತ್ತು. ಅವರ ಕಾಲಿಗೆ ಡ್ರಮ್ ಬಿದ್ದಿತ್ತು. ಕಾಲು ಮುರಿದೇ ಹೋಯ್ತು ಎಂದು ಗೋಳಾಡಿದ್ದರು. ಸುರೇಶ್ ಅವರ ಈ ಸಂಕಟ ಕಂಡು ಮನೆಮಂದಿ ಕೂಡ ಗಾಬರಿ ಆಗಿದ್ದರು. ಬಳಿಕ ಅವರಿಗೆ ಬಿಗ್ ಬಾಸ್ ಟೀಮ್ ಚಿಕಿತ್ಸೆ ನೀಡಿದ್ದರು.
Advertisement
View this post on Instagram
ಬಳಿಕ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎಂದು ದೊಡ್ಮನೆಯಿಂದ ಸುರೇಶ್ ಹೊರಬಂದಿದ್ದರು. ಆದರೆ ಈಗ ಅಂದು ಆಗಿರುವ ಗಾಯ ಉಲ್ಭಣಗೊಂಡಿದೆ. ಹಾಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆವೊಂದರಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಫೆ.3) ಬೆಳಗ್ಗೆ ಸುರೇಶ್‌ಗೆ ಆಪರೇಷನ್ ಮಾಡಲಾಗಿದೆ. ಆತಂಕಪಡುವ ಅಗತ್ಯವಿಲ್ಲ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, 3 ದಿನಗಳ ಬಳಿಕ ಸುರೇಶ್ ಡಿಸ್ಚಾರ್ಜ್ ಆಗಲಿದ್ದಾರೆ.
Advertisement