‘ಬಿಗ್ ಬಾಸ್’ ಖ್ಯಾತಿಯ ಧರ್ಮ ಕೀರ್ತಿರಾಜ್ (Dharma Kirthiraj) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗ್ತಿದ್ದಾರೆ. ನಿನ್ನೆ (ಏ.30) ಅಕ್ಷಯ ತೃತೀಯ ಹಿನ್ನೆಲೆ ‘ಸಿಂಧೂರಿ’ (Sindhoori) ಹೊಸ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಇದನ್ನೂ ಓದಿ:ಪಹಲ್ಗಾಮ್ ದಾಳಿಗೆ ಮುನೀರ್, ಪಾಕ್ ಸೇನೆ, ಇಸ್ಲಾಮಿಕ್ ಉಗ್ರರು ಕಾರಣ – ಪಾಕ್ ನಟಿ ಕೆಂಡಾಮಂಡಲ
ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಜೊತೆ ಧರ್ಮ ಕೀರ್ತಿರಾಜ್ ‘ಸಿಂಧೂರಿ’ ಚಿತ್ರಕ್ಕೆ ಕೈಜೋಡಿಸಿದ್ದಾರೆ. ಏ.30ರಂದು ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ‘ಸಿಂಧೂರಿ’ ಸಿನಿಮಾದ ಮುಹೂರ್ತ ನೆರವೇರಿದೆ. ಮೇ 1ರಿಂದ 45 ದಿನಗಳ ಕಾಲ ಸಕಲೇಶಪುರ ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ:ಸೆಟ್ಟೇರಿತು ಸೂರಿ, ಯುವ ಸಿನಿಮಾ- ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ
ಡೈರೆಕ್ಟರ್ ಶಂಕರ್ ನಿರ್ದೇಶನದ ‘ಸಿಂಧೂರಿ’ ಚಿತ್ರ ಕಾಲ್ಪನಿಕ ಕಥೆಯಾಗಿದ್ದು, ಮರ್ಡರ್ ಮಿಸ್ಟಿ ಕಥೆ ಹೇಳಲಿದ್ದಾರೆ. ಇದರಲ್ಲಿ ಧರ್ಮಗೆ ವಿಭಿನ್ನವಾಗಿರೋ ಪಾತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಧರ್ಮಗೆ ಜೋಡಿಯಾಗಿ ರಾಗಿಣಿ ನಟಿಸುತ್ತಿಲ್ಲ. ಬದಲಾಗಿ ಧರ್ಮಗೆ ಠಕ್ಕರ್ ಕೊಡೋ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ತಿರುವು ಕೊಡುವ ಪವರ್‌ಫುರ್ ಪಾತ್ರದಲ್ಲಿ ರಾಗಿಣಿ ನಟಿಸಲಿದ್ದಾರೆ.
ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್, ತೆಲುಗು ಬ್ಲಡ್ ರೋಸಸ್, ನಯನ ಮಧುರ, ವಸುಂಧರ ದೇವಿ ಸೇರಿದಂತೆ ಹಲವು ಸಿನಿಮಾಗಳು ಧರ್ಮ ಕೀರ್ತಿರಾಜ್ ಕೈಯಲ್ಲಿವೆ.