ಸ್ಯಾಂಡಲ್‌ವುಡ್ ನಟ ಧರ್ಮ ಕೀತೀರಾಜ್ ಅವರು (Dharma Kirthiraj) ‘ಬಿಗ್ ಬಾಸ್ ಕನ್ನಡ 11’ರ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರು ತುಪ್ಪದ ಬೆಡಗಿ ರಾಗಿಣಿ (Ragini Dwivedi) ಜೊತೆ ‘ಸಿಂಧೂರಿ’ ಎಂಬ ಕಥೆ ಹೇಳಲು ರೆಡಿಯಾಗಿದ್ದಾರೆ.
‘ಸಿಂಧೂರಿ’ (Sindhoori) ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧರ್ಮ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಗಿಣಿ ಪಾತ್ರಕ್ಕೂ ಚಿತ್ರದಲ್ಲಿ ತೂಕವಿದೆ. ಇಬ್ಬರೂ ಇದೀಗ 1990ರ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಶಂಕರ್ ಕೋನಮಾನಹಳ್ಳಿ ಎಂಬುವವರು ನಿರ್ದೇಶನ ಮಾಡ್ತಿದ್ದಾರೆ. ಇದನ್ನೂ ಓದಿ:ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ
ಏ.30ರಂದು ಅಕ್ಷಯ ತೃತೀಯ ಹಿನ್ನೆಲೆ ‘ಸಿಂಧೂರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ನಾಳೆ ಈ ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್ ಹೊರಬೀಳಲಿದೆ. ಇದನ್ನೂ ಓದಿ: ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಉಗ್ರರ ದಾಳಿ ಖಂಡಿಸಿದ ಶ್ರೀನಿಧಿ ಶೆಟ್ಟಿ
ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್, ತೆಲುಗು ಬ್ಲಡ್ ರೋಸಸ್, ನಯನ ಮಧುರ, ವಸುಂಧರ ದೇವಿ ಸೇರಿದಂತೆ ಹಲವು ಸಿನಿಮಾಗಳು ಧರ್ಮ ಕೀರ್ತಿರಾಜ್ ಕೈಯಲ್ಲಿವೆ.