‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಸ್ಪರ್ಧಿ ಭವ್ಯಾ ಗೌಡ (Bhavya Gowda) ಅವರು ಬಿಗ್ ಬಾಸ್ ಆಟ ಮುಗಿದ್ಮೇಲೆ ಮದುವೆ, ವೃತ್ತಿ ಜೀವನದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ‘ಚೆಲುವಿನ ಚಿತ್ತಾರ’ ಖ್ಯಾತಿಯ ನಟಿ ಅಮೂಲ್ಯ ಜೊತೆಗಿನ ಬಾಂಧವ್ಯದ ಬಗ್ಗೆ ಭವ್ಯಾ ಮಾತನಾಡಿದ್ದಾರೆ. ಅಮೂಲ್ಯ (Amulya) ಅತ್ತಿಗೆ ಸಖತ್ ಸ್ವೀಟ್ ಎಂದಿದ್ದಾರೆ.
- Advertisement 2-
ಬಿಗ್ ಬಾಸ್‌ಗೆ ಹೋಗುವಾಗ ಜಗದೀಶ್ ಅಣ್ಣ ಮತ್ತು ಅಮೂಲ್ಯ ಅತ್ತಿಗೆ ಆಲ್ ದಿ ಬೆಸ್ಟ್ ಹೇಳಿದ್ರು. ನಾನ್ ಬಿಗ್ ಬಾಸ್‌ಗೆ ಹೋದ್ಮೇಲೆಯೂ ಅಮೂಲ್ಯ ಅತ್ತಿಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. 2 ದಿನದಿಂದ ಅಂದುಕೊಳ್ಳುತ್ತೇಲೆ ಇದ್ದೇನೆ. ಅವರ ಮನೆಗೆ ಅಮೂಲ್ಯ ಅತ್ತಿಗೆ ಹಾಗೂ ಅಣ್ಣನ್ನು ಭೇಟಿಯಾಗಬೇಕು ಅಂತ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ: ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ
- Advertisement 3-
- Advertisement 4-
ಇನ್ನೂ ಅಮೂಲ್ಯ ಅತ್ತಿಗೆ ಯಾವಾತ್ತೂ ಆ್ಯಕ್ಟಿಂಗ್ ಹಾಗೇ ಮಾಡು ಹೀಗೆ ಎಂದು ಸಜೇಷನ್ ಕೊಟ್ಟಿಲ್ಲ. ಆದರೆ ನೀನು ಏನು ಮಾಡುತ್ತಿದ್ದಿಯೋ ಅದು ನಿನಿಗೆ ಗೊತ್ತಿರಬೇಕು. ಕೆಲಸದಲ್ಲಿ 100% ಕೊಡು ಒಂದಿಷ್ಟು ಸಲಹೆ ಕೊಟ್ಟಿದ್ದಾರೆ. ಅಮೂಲ್ಯ ಅತ್ತಿಗೆ ಸಖತ್ ಸ್ವೀಟ್, ಅದು ಎಲ್ಲರಿಗೂ ಗೊತ್ತು. ಅವರು ಸಖತ್ ಹಂಬಲ್, ಯಾರೇ ಮನೆಗೆ ಬಂದ್ರೂ ಖುಷಿಯಿಂದ ಮಾತನಾಡಿಸುತ್ತಾರೆ. ಜಗದೀಶ್ ಅಣ್ಣ ಹೇಳ್ತಾರೆ, ನಿಮಗೆ ಏನು ಹೇಳೋದು. ನಿಮ್ಮ ಮನೆಗೆ ನೀವೇ 4 ಜನ ಗಂಡು ಮಕ್ಕಳು ಅಂತ. ನೀವು ಬೆಳೆಯುತ್ತಿರುವ ರೀತಿ ಖುಷಿಯಿದೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನಮ್ಮ ಒಳ್ಳೆಯದನ್ನೇ ಅವರು ಬಯಸುತ್ತಾರೆ ಎಂದು ಭವ್ಯಾ ಹೇಳಿದ್ದಾರೆ.
ಇನ್ನೂ ಭವ್ಯಾಗೆ ಸಂಬಂಧದಲ್ಲಿ ಜಗದೀಶ್ ಅವರು ಅಣ್ಣ ಆಗಬೇಕು, ದೊಡ್ಡಪ್ಪನ ಮಗ. ಅಮೂಲ್ಯ ಅವರು ಅತ್ತಿಗೆ ಆಗುತ್ತಾರೆ.