‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಮುಗಿದ್ಮೇಲೆ ಬಾಸ್ ಚೈತ್ರಾ (Chaithra Kundapura) ಮತ್ತು ಶಿಷ್ಯ ರಜತ್ (Rajath Kishan) ಜಗಳ ಮುಂದುವರೆದಿದೆ. ದೊಡ್ಮನೆಯ ಕೆಡಿ ಜೋಡಿ ಎಂದೇ ಬಿರುದು ಪಡೆದಿದ್ದ ಫೈರ್ ಬ್ರ್ಯಾಂಡ್ ಚೈತ್ರಾ ಹಾಗೂ ರಜತ್ ಹೊಸ ಶೋನಲ್ಲಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ಕೊಡೋಕೆ ರೆಡಿಯಾಗಿದ್ದಾರೆ.
ಬಿಗ್ ಬಾಸ್‌ನಲ್ಲಿ ರಜತ್ ಮತ್ತು ಚೈತ್ರಾ ಅವರ ಜಗಳ ಹೇಗಿತ್ತು ಎಂದು ಫ್ಯಾನ್ಸ್ ನೋಡಿದ್ದಾರೆ. ಅವರಿಗೆ ಅದು ಜಗಳ ಆಗಿದ್ರೆ, ನೋಡುಗರಿಗೆ ಅದು ಮನರಂಜನೆ ಆಗಿತ್ತು. ಹಾಗೇ ಇಬ್ಬರೂ ಮಾತಿಗೆ ಮಾತು ಏಟಿ ಏದುರೇಟು ಕೊಟ್ಟು ಆಟ ಆಡುತ್ತಿದ್ದರು. ಈಗ ಅದೇ ಮನರಂಜನೆ ಕೊಡಲು ಇಬ್ಬರೂ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ.
ದೊಡ್ಮನೆ ಆಟ ಮುಗಿದ ಮೇಲೆ ಹೊಸ ಶೋಗೆ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಹೊಸ ಪ್ರೋಮೋ ರಿಲೀಸ್ ಆಗಿದ್ದು, ರಜತ್ ಮತ್ತು ಚೈತ್ರಾ ಜುಗಲ್‌ಬಂದಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್- ಫ್ಯಾನ್ಸ್‌ಗೆ ಕಾದಿದ್ಯಾ ಸರ್ಪ್ರೈಸ್?
ಅನುಪಮಾ ಗೌಡ ನಿರೂಪಣೆಯ ಈ ಶೋನಲ್ಲಿ ರಜತ್, ಚೈತ್ರಾ, ಹನುಮಂತ, ಧನರಾಜ್ ಆಚಾರ್, ಶೋಭಾ ಶೆಟ್ಟಿ, ಐಶ್ವರ್ಯಾ ಸಿಂಧೋಗಿ, ಭವ್ಯಾ ಭಾಗಿಯಾಗಿದ್ದಾರೆ. ಇದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.