‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಬಿಗ್ ಬಾಸ್‌ನಲ್ಲಿ ಶಿಶಿರ್ ಶಾಸ್ತ್ರಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಐಶ್ವರ್ಯಾ ಮದುವೆ ಕುರಿತಯ ಮಾತನಾಡಿದ್ದಾರೆ. ಶಿಶಿರ್ (Shishir Shastry) ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಐಶ್ವರ್ಯಾ ರಿಯಾಕ್ಷನ್ ಏನು? ಎಂಬುದನ್ನು ಮಾತನಾಡಿದ್ದಾರೆ.
Advertisement
ನನ್ನ ಮತ್ತು ಶಿಶಿರ್ ಮಧ್ಯೆ ಇರೋದು ಜೆನ್ಯೂನ್ ಆಗಿರುವಂತಹ ಫ್ರೆಂಡ್‌ಶಿಪ್. ಅದು ಬಿಟ್ಟು ಇನ್ನೇನು ಇಲ್ಲ. ನಾವಿಬ್ಬರೂ 2016ರಲ್ಲಿ ಒಟ್ಟಿಗೆ ಮೂವಿ ಮಾಡಿದ್ದೇವೆ. ಅಲ್ಲಿಂದ ನಾವಿಬ್ಬರಿಗೂ ಪರಿಚಯ ಆಗಿತ್ತು. ಆವಾಗ ಶಿಶಿರ್ ಅವರ ವ್ಯಕ್ತಿತ್ವ ಹೇಗಿತ್ತೋ, ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಬಂದಾಗಲೂ ಹಾಗೇ ಇತ್ತು. ಅದರ ನಂತರ ನಮಗೆ ಫೋನ್ ಸಂಪರ್ಕ ಏನು ಇರಲಿಲ್ಲ. ಬಿಗ್ ಬಾಸ್‌ಗೆ ಬಂದ್ಮೇಲೆಯೇ ಮತ್ತೆ ಪರಿಚಯ ಆಯ್ತು. ನನಗೆ ಅವರು ಸ್ಟ್ರಾಂಗ್ ಎಮೋಷನಲಿ ಬೆಂಬಲ ಕೊಟ್ಟಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮನಸ್ಸಿಗೆ ನೋವು ಮಾಡಬೇಡಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್
Advertisement
Advertisement
ನನಗೆ ಹಲವಾರು ಕಡೆ ಅನ್ಯಾಯ ಆದಾಗ ನನ್ನ ಪರ ಶಿಶಿರ್ ನಿಂತಿದ್ದಾರೆ. ಅಷ್ಟು ಬಿಟ್ಟರೇ ನಮ್ಮ ನಡುವೆ ಏನಿಲ್ಲ. ಶಿಶಿರ್ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಫ್ಯಾನ್ಸ್‌ಗೆ ಬೇಸರ ಆಗಿದ್ರೆ ಸಾರಿ, ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಮಾತನಾಡಿದ್ದಾರೆ.