‘ಬಿಗ್ ಬಾಸ್’ ಖ್ಯಾತಿಯ ಸ್ಪರ್ಧಿ ವಿನಯ್ ಗೌಡ (Vinay Gowda) ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆ ವಿನಯ್ ಪ್ರತಿಕ್ರಿಯಿಸಿ, ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ
ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಆರ್ಮ್ಸ್ ಆಕ್ಟ್ ಅಡಿ ವಿನಯ್ ಗೌಡ ವಿರುದ್ದ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿತ್ತು. ಆದರೆ ಬಸವೇಶ್ವರ ನಗರದಲ್ಲಿ ಆಗಿರೋ ಕೇಸ್‌ಗೆ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಉತ್ತರ ನೀಡಿದ್ದಾರೆ. ಫಿಲ್ಮ್ ಶೂಟಿಂಗ್‌ಗಾಗಿ ಮಚ್ಚು ಬಳಸಿದ್ದು, ಪೊಲೀಸರಿಗೆ ವಿನಯ್ ಕ್ಲ್ಯಾರಿಟಿ ನೀಡಿದ್ದಾರೆ. ಆದರೆ ಕೇಸ್ ದಾಖಲಾಗಿರೋ ಬಸವೇಶ್ವರ ಪೊಲೀಸ್ ಠಾಣೆಗೆ ಹಾಜರಾಗುವಂತೆ ವಿನಯ್‌ಗೆ ಸೂಚಿಸಲಾಗಿದೆ.
ನಾನು ‘ಪುಷ್ಪ’ ಚಿತ್ರದಲ್ಲಿ ಪಾತ್ರ, ರಜತ್ ‘ಕರಿಯ’ ಸಿನಿಮಾದಲ್ಲಿನ ದರ್ಶನ್ ಪಾತ್ರದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಟಿವಿ ಶೂಟಿಂಗ್ ಮಾಡುತ್ತಿರೋದಾಗಿ ಪತ್ರದಲ್ಲಿ ವಿನಯ್ ತಿಳಿಸಿದ್ದಾರೆ. ಇನ್ನೂ ವಿನಯ್ ಶೇರ್ ಮಾಡಿರುವ ರೀಲ್‌ನಲ್ಲಿ ಓರಿಜಿನಲ್ ಮಚ್ಚು ಬಳಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ರಜತ್ (Rajath) ಮತ್ತು ವಿನಯ್‌ಗೆ ಮಾಡಿರುವ ರೀಲ್ಸ್‌ನಿಂದ ಸಂಕಷ್ಟ ಎದುರಾಗಿದೆ.
ಅಂದಹಾಗೆ, ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲಿನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.