‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಅವರು ತಮಿಳು ಸಿನಿಮಾವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಮಾದಕವಾಗಿ ನಟಿ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಭಯೋತ್ಪಾದಕರಿಗೆ ಭಾರತ ಒಳ್ಳೆಯ ಉತ್ತರವನ್ನೇ ಕೊಟ್ಟಿದೆ- ಡಾಲಿ

View this post on Instagram
ಅಂದಹಾಗೆ, ಕನ್ನಡದ ‘ಪೆನ್‌ಡ್ರೈವ್’ ಸಿನಿಮಾದಲ್ಲಿ ಮಾಲಾಶ್ರೀ ಜೊತೆ ತನಿಷಾ ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಂದಿಗೆ ಕಿಶನ್ ಬಿಳಗಲಿ ಕೂಡ ನಟಿಸಿದ್ದಾರೆ.
View this post on Instagram
ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ತನಿಷಾ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಕ್ಕಿರಲಿಲ್ಲ. ಕಳೆದ ಸೀಸನ್ ಬಿಗ್ ಬಾಸ್ ಕನ್ನಡ 10ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ್ಮೇಲೆ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಇದಷ್ಟೇ ಅಲ್ಲ, ನಟನೆಯ ಜೊತೆ ಹೋಟೆಲ್ ಉದ್ಯಮ, ಆಭರಣದ ಮಳಿಗೆ ಹಾಗೂ ನಿರ್ಮಾಣ ಸಂಸ್ಥೆ ಕೂಡ ಶುರು ಮಾಡಿದ್ದಾರೆ.

