‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ನಮ್ರತಾ ಗೌಡ (Namratha Gowda) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ನಟಿ ಕ್ಯಾಮೆರಾ ಮುಂದೆ ನಿಲ್ಲೋದಕ್ಕೆ ರೆಡಿಯಾಗಿದ್ದಾರೆ. ಹೊಸ ಸೀರಿಯಲ್‌ಗೆ ನಾಯಕಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡ್ತಿದ್ದಾರೆ. ಇದನ್ನೂ ಓದಿ:ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು
ಕೊನೆಗೂ ನಮ್ರತಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. 2024ರಲ್ಲಿ ಬಿಗ್ ಬಾಸ್ ಶೋ ಮುಗಿದ ಬಳಿಕ ಒಂದು ವರ್ಷಗಳ ಕಾಲ ಯಾವುದೇ ಸಿನಿಮಾ ಅಥವಾ ಸೀರಿಯಲ್ ಬಗ್ಗೆ ನಟಿ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಈಗ ಕಿರಣ್ ರಾಜ್ (Kiran Raj) ನಟನೆಯ ‘ಕರ್ಣ’ ಸೀರಿಯಲ್‌ಗೆ (Kaarna Serial) ನಮ್ರತಾ ನಾಯಕಿಯಾಗಿ ಬರಲು ರೆಡಿಯಾಗಿದ್ದಾರೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿದೆ: ಅಪ್‌ಡೇಟ್ ಕೊಟ್ಟ ವಿನಯ್
ಕಿರಣ್ ರಾಜ್‌ಗೆ ಈ ಸೀರಿಯಲ್‌ನಲ್ಲಿ ಇಬ್ಬರೂ ನಾಯಕಿಯರಿದ್ದಾರೆ. ನಮ್ರತಾ ಜೊತೆ ಭವ್ಯಾ ಗೌಡ (Bhavya Gowda) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ನಟಿ ಕಿರುತೆರೆಯತ್ತ ಮುಖ ಮಾಡಿದ್ದಾರೆ.
ಅಂದಹಾಗೆ, ಆಕಾಶದೀಪ, ನಾಗಿಣಿ 2, ಬಿಗ್ ಬಾಸ್ ಕನ್ನಡ 10 ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಮ್ರತಾ ಕೆಲಸ ಮಾಡಿದ್ದಾರೆ. ಬಾಲನಟಿಯಾಗಿ ನಮ್ರತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.