ನವದೆಹಲಿ: ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ (BBC) ಕಚೇರಿಯ ಆರ್ಥಿಕ ಸಮೀಕ್ಷೆ ಅಂತ್ಯವಾಗಿದೆ. ಮೂರು ದಿನಗಳ ಪರಿಶೀಲನೆ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಸಮೀಕ್ಷೆ ಅಂತ್ಯಗೊಳಿಸಿದ್ದು, ನಾವು ಪಕ್ಷಾತೀತ ಮತ್ತು ಭಯರಹಿತ ಪತ್ರಿಕೋದ್ಯಮ (Journalism) ಮುಂದುವರಿಸಲಿದ್ದೇವೆ ಎಂದು ಆಡಳಿತ ವರ್ಗ ಹೇಳಿದೆ.
ಕಳೆದ ಮೂರು ದಿನಗಳಲ್ಲಿ ಸುಮಾರು 59 ಗಂಟೆಗಳ ಕಾಲ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಸಮೀಕ್ಷೆಯಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳು ಮತ್ತು ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ನಮ್ಮ ಪ್ರಸಾರ ಸಾಮಾನ್ಯ ಸ್ಥಿತಿಗೆ ಬಂದಿದ್ದು ಸಮೀಕ್ಷೆ ವೇಳೆ ಹಗಲು ರಾತ್ರಿ ಅಧಿಕಾರಿಗಳಿಗೆ ಸಹಕರಿಸಿದ ಸಿಬ್ಬಂದಿಯನ್ನು ನಾವು ಶ್ಲಾಘಿಸುತ್ತೇವೆ ಎಂದು ಬಿಬಿಸಿ ಹೇಳಿದೆ. ಇದನ್ನೂ ಓದಿ: 18 ಮಂದಿಯನ್ನು ಸಾಗಿಸುತ್ತಿದ್ದ ಜೀಪ್‌ನಿಂದ ಟ್ರಕ್‌ಗೆ ಡಿಕ್ಕಿ; 7 ಮಂದಿ ದುರ್ಮರಣ – ಜೀಪ್ ಚಾಲಕ ಎಸ್ಕೇಪ್
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದೆಹಲಿ (Delhi) ಮತ್ತು ಮುಂಬೈನಲ್ಲಿರುವ (Mumbai) ಬಿಬಿಸಿ ಕಚೇರಿಗಳನ್ನು ಪ್ರವೇಶಿಸಿತ್ತು. ಇದು ಅಂತಾರಾಷ್ಟ್ರೀಯ ತೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣ ಎಂದು ಐಟಿ ಮೂಲಗಳು ತಿಳಿಸಿದ್ದವು. ಸಮೀಕ್ಷೆ ವೇಳೆ ಅಧಿಕಾರಿಗಳು ಆಯ್ದ ಸಿಬ್ಬಂದಿಯಿಂದ ಹಣಕಾಸಿನ ದತ್ತಾಂಶವನ್ನು ಸಂಗ್ರಹಿಸಿದ್ದರು.
ಸಮೀಕ್ಷಾ ತಂಡಗಳು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಂತೆ ಬಿಬಿಸಿ ತನ್ನ ಉದ್ಯೋಗಿಗಳಿಗೆ ತಮ್ಮ ಎಲೆಕ್ಟ್ರಾನಿಕ್ ಸಾಧನಗಳಿಂದ ಯಾವುದೇ ಡೇಟಾವನ್ನು ಅಳಿಸದಂತೆ ಕೇಳಿಕೊಂಡಿತು. ಇದನ್ನೂ ಓದಿ: Article 370 ರದ್ದು- ವಿಚಾರಣೆ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ: ಸಿಜೆಐ ಡಿವೈ ಚಂದ್ರಚೂಡ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಕ್ಷ್ಯಚಿತ್ರ ಸಿದ್ಧಪಡಿಸಿದ, ಪ್ರಸಾರ ಮಾಡಿದ ಬಳಿಕ ನಡೆದ ಸಮೀಕ್ಷೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k