ಬಿಗ್ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದ್ದಾರೆ. ಫಿನಾಲೆಗೆ ಕೆಲವು ದಿನಗಳು ಬಾಕಿ ಇರುವಾಗ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗುತ್ತಿದೆ. ಈ ಟಾಸ್ಕ್ ಗೆದ್ದ ಸ್ಪರ್ಧಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಈ ಜಾಕ್ಪಾಟ್ ಪಡೆದುಕೊಳ್ಳೋಕೆ ಸ್ಪರ್ಧಿಗಳು ರೆಡಿಯಾಗಿ ಸ್ಪರ್ಧೆ ಶುರು ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು 113 ದಿನಗಳ ಸುದೀರ್ಘ ಪಯಣದಲ್ಲಿ ಎಲ್ಲಾ ಭಾವಗಳನ್ನು ದಾಟಿ ಗುರಿಗೆ ಹತ್ತಿರವಾಗಿದ್ದಾರೆ. ಎರಡು ಲಕ್ಷ ಪಡೆದುಕೊಳ್ಳಲು ಬಿಗ್ಬಾಸ್ ಟಾಸ್ಕ್ ನೀಡುತ್ತಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 5 ಅಂಕ, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗೆ ಅಂಕ 3 ಹಾಗೂ ಮೂರನೇ ಸ್ಥಾನಕ್ಕೆ 1 ಅಂಕ ಸಿಗುತ್ತದೆ. ವಾರದ ಕೊನೆಯಲ್ಲಿ ಯಾರ ಬಳಿ ಅಂಕ ಹೆಚ್ಚಿರುತ್ತದೆಯೋ ಅವರಿಗೆ ಎರಡು ಲಕ್ಷ ರೂಪಾಯಿ ಸಿಗಲಿದೆ ಎಂದು ಬಿಗ್ಬಾಸ್ ಸೂಚನೆಯನ್ನು ನೀಡಿದ್ದಾರೆ.
Advertisement
Advertisement
ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎನ್ನುವ ವಿಚಾರ ತಿಳಿದ ಸ್ಪರ್ಧಿಗಳು ತಮ್ಮ ಗೇಮ್ ಪ್ರಾರಂಭಿಸಿದ್ದಾರೆ. ಎಷ್ಟು ದುಬಾರಿ ಮೊತ್ತದ ಹಣ ಸಿಗುತ್ತಿದೆಯೋ ಅಷ್ಟೇ ಎಲ್ಲಾ ಟಾಸ್ಕ್ಗಳು ಸಾಕಷ್ಟು ಟಫ್ ಇರಲಿದೆ ಎನ್ನುವ ಯೋಚನೆ ಸ್ಪರ್ಧಿಗಳಿಗೆ ಇದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ಬಾಸ್ ಸ್ಪರ್ಧಿಗಳಿಗೆ ಮತ್ತಷ್ಟು ಸ್ರ್ಧೆಯನ್ನು ಒಡ್ಡುತ್ತಿದ್ದಾರೆ.
Advertisement
ಪ್ರತಿ ವಾರ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತದೆ. ವಾರ ಪೂರ್ತಿ ಟಾಸ್ಕ್ ಇರುತ್ತದೆ. ಈ ಟಾಸ್ಕ್ನಲ್ಲಿ ಗೆಲ್ಲೋರು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುತ್ತಾರೆ. ಕೊನೆಯಲ್ಲಿ ಟಾಸ್ಕ್ನಲ್ಲಿ ಗೆಲ್ಲೋರು ಕ್ಯಾಪ್ಟನ್ ಆಗುತ್ತಾರೆ. ಆದರೆ ಕೊನೆಯ ವಾರವಾದ್ದರಿಂದ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಇಲ್ಲ. ಆದರೆ ಬಿಗ್ಬಾಸ್ ಸರ್ಪ್ರೈಸ್ ನೀಡಿದ್ದಾರೆ.