ಪಾಟ್ನಾ: ಬಿಹಾರ ಚುನಾವಣಾ ಕಣ ರಣಾಂಗಣವಾಗಿ ಮಾರ್ಪಟ್ಟಿದೆ. ರಾಹುಲ್ ಗಾಂಧಿಯ ಮತದಾರರ ಅಧಿಕಾರ ಯಾತ್ರೆಯಲ್ಲಿ (Voter Adhikar Yatra) ಪ್ರಧಾನಿ ಮೋದಿಯವ್ರನ್ನು (PM Modi) ನಿಂದಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪಾಟ್ನಾದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ.
ರಸ್ತೆಯಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಬಿಜೆಪಿಯ ಪ್ರತಿಭಟನಾ (BJP Protest Rally) ಮೆರವಣಿಗೆ ಬಿಹಾರ ಕಾಂಗ್ರೆಸ್ ಕಚೇರಿ ಸದಾಕತ್ ಆಶ್ರಮ ಬಳಿ ಸಾಗುವಾಗ ನಡುವೆ ಘರ್ಷಣೆ ಸಂಭವಿಸಿದೆ. ಇದನ್ನೂ ಓದಿ: ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – TMC ಸಂಸದೆ ಮಹುವಾ ಮೊಯಿತ್ರಾ ಶಾಕಿಂಗ್ ಹೇಳಿಕೆ
ಮೊದಲು ವಾಗ್ವಾದ ಏರ್ಪಟ್ಟಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿ ಪರಸ್ಪರ ಕೋಲಿನಿಂದ ಹೊಡೆದುಕೊಂಡಿದ್ದಾರೆ. ನಂತರ ಕಲ್ಲು ತೂರಾಟ ಕೂಡ ನಡೆದಿದೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್
ಕಾಂಗ್ರೆಸ್ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು ಎಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!