ಸಿದ್ಧಾಂತದ ಕದನ ಮುಂದುವರಿಯುತ್ತದೆ: 3 ರಾಜ್ಯಗಳಲ್ಲಿ ಸೋಲಿನ ಬಳಿಕ ರಾಹುಲ್ ಪ್ರತಿಕ್ರಿಯೆ

Public TV
1 Min Read
Rahul Gandhi

ನವದೆಹಲಿ: ಪಂಚರಾಜ್ಯ ಚುನಾವಣೆಯಲ್ಲಿ (Five State Elections) 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಈ 4 ರಾಜ್ಯಗಳ ಪೈಕಿ 3 ರಾಜ್ಯಗಳಲ್ಲಿ ಕಾಂಗ್ರೆಸ್ (Congress) ಭಾರೀ ಸೋಲನ್ನು ಎದುರಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಆದರೆ ಸಿದ್ಧಾಂತದ ಕದನ ಮುಂದುವರಿಯುತ್ತದೆ ಎಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ರಾಗಾ, ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಸಿದ್ಧಾಂತದ ಕದನ ಮುಂದುವರಿಯುತ್ತದೆ. ತೆಲಂಗಾಣದ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಜಾಳು ತೆಲಂಗಾಣ ಮಾಡುವ ಭರವಸೆಯನ್ನು ನಾವು ಖಂಡಿತ ಈಡೇರಿಸುತ್ತೇವೆ. ಅವರ ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ರಾಜ್ಯಗಳ ಜನಾದೇಶ ಲೋಕಸಭೆಯ ಹ್ಯಾಟ್ರಿಕ್‌ ಗೆಲುವಿನ ಗ್ಯಾರಂಟಿ: ಮೋದಿ ಭರವಸೆ

ಪಂಚರಾಜ್ಯ ಚುನಾವಣೆಯ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಪಕ್ಷ ಸತತ 3ನೇ ಬಾರಿ ಅಧಿಕಾರಕ್ಕೇರುವುದನ್ನು ತಡೆದು ಕಾಂಗ್ರೆಸ್ ಗೆದ್ದಿದೆ. ಬಾಕಿ ಉಳಿದಿರುವ ಮಿಜೋರಾಂ ರಾಜ್ಯದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಇದನ್ನೂ ಓದಿ: ನಾವು ಸೋಲಿನಿಂದ ಕುಗ್ಗುವುದಿಲ್ಲ, ಗೆಲುವಿನಿಂದ ಹಿಗ್ಗುವುದಿಲ್ಲ: ಸಿದ್ದರಾಮಯ್ಯ

Share This Article