ಬೊಗೋಟಾ: ಈ ಬಾರಿ ಬೇಸಿಗೆಗೆ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮಾತ್ರವಲ್ಲ ವಿಶ್ವದ ವಿವಿಧೆಡೆ ಮಹಾನಗರಗಳೂ ತೀವ್ರ ನೀರಿನ ಕೊರತೆ ಎದುರಿಸುತ್ತಿವೆ.
ಅದರಲ್ಲೂ ದಕ್ಷಿಣ ಅಮೆರಿಕದ (South America) ಬೊಗೋಟಾ ನಗರವಂತೂ ಗಂಭೀರ ಸ್ಥಿತಿಯಲ್ಲಿದೆ. ಜನರಿಗೆ ಆಶಾಕಿರಣದಂತಿದ್ದ ಜಲಾಶಯಗಳೇ ಬತ್ತಿಹೋಗುತ್ತಿವೆ. ಹಾಗಾಗಿ, ನೀರು ಮಿತವ್ಯಯಕ್ಕೆ ಅಲ್ಲಿನ ಮೇಯರ್, ಜನರಿಗೆ ವಿಚಿತ್ರ ಸಲಹೆಯೊಂದನ್ನ ನೀಡಿದ್ದಾರೆ. ಜನ ತಮ್ಮ ಸಂಗಾತಿಯೊಂದಿಗೆ ಒಟ್ಟಿಗೆ ಸ್ನಾನ ಮಾಡುವ ಮೂಲಕ ನೀರು ಉಳಿಸಬೇಕು ಎಂದು ಸಲಹೆ ನೀಡಿದ್ದಾರೆ.
Advertisement
Advertisement
ಇತ್ತೀಚೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿ ನೀರು ಪೂರೈಕೆ ತಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬೊಗೋಟಾ ಮೇಯರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು, ಸಂಗಾತಿಯಾದವರು ಜೋಡಿಯಾಗಿ ಸ್ನಾನ ಮಾಡುವ ಮೂಲಕ ನೀರು ಮಿತವ್ಯಯ ಬಳಕೆಯ ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಭಾನುವಾರ ಮೈಸೂರಿನಲ್ಲಿ ರ‍್ಯಾಲಿ, ಮಂಗಳೂರಿನಲ್ಲಿ ರೋಡ್ ಶೋ – ಎಷ್ಟು ಗಂಟೆಗೆ ಎಲ್ಲಿ ಮೋದಿ ಕಾರ್ಯಕ್ರಮ?
Advertisement
Advertisement
ಜೋಡಿಯಾಗಿ ಸ್ನಾನ ಮಾಡಿ ಎಂದು ಕರೆ ನೀಡಿರುವ ಮೇಯರ್, ಒಂದು ವೇಳೆ ರಜಾ ದಿನಗಳಲ್ಲಿ ಮನೆಯಲ್ಲೇ ಇರುವುದಾದರೆ ಅಂದು ಸ್ನಾನ ಮಾಡಬೇಡಿ ಎಂದೂ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌ನಿಂದ ಇಸ್ರೇಲ್ ಮೇಲೆ 100 ಕ್ಕೂ ಹೆಚ್ಚು ಡ್ರೋನ್ ದಾಳಿ
1980ರ ಬಳಿಕ ಬೊಗೋಟಾ ನಗರದಲ್ಲಿ ಅಪಾರ ಪ್ರಮಾಣದ ಜಲಕ್ಷಾಮ ಎದುರಾಗುತ್ತಿದೆ. ಜಲಾಶಯದ ಮಟ್ಟ ಸಹಜ ಪ್ರಮಾಣಕ್ಕಿಂತ 17 ಪ್ರತಿಶತದಷ್ಟು ಕಡಿಮೆಯಾಗಿದೆ. ಹಾಗಾಗಿ ನೀರಿನ ಮಿತ ಬಳಕೆಗೆ ಜನರು ಮುಂದಾಗಬೇಕು. ಜನರಿಗೆ ಕುಡಿಯುವ ನೀರನ್ನು ಪೂರೈಸಲು ಬೇಕಾಗ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.