ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ (Lingayat Officials) ಸ್ಥಾನಮಾನವಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸಿದ್ದರಾಮಯ್ಯ ಬಣದ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಟಕ್ಕರ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿಂದು ಲಿಂಗಾಯತ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ರಾಯರೆಡ್ಡಿ, ಸಿದ್ದರಾಮಯ್ಯ (Siddaramaiah) ಲಿಂಗಾಯತ ವಿರೋಧಿ ಅಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಮೂವರು ಡಿಸಿಗಳು, 7 ಎಸ್ಪಿಗಳು, 4 ಸಿಇಒ, 13 ಉಪಕುಲಪತಿಗಳು, 7 ಮಂತ್ರಿಗಳು ಇದ್ದಾರೆ ಅಂತಾ ರಾಯರೆಡ್ಡಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಆನ್‌ಲೈನ್ ಪೋರ್ಟಲ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ
Advertisement
Advertisement
ಶಾಮನೂರು ಅವರು ಸ್ವಲ್ಪ ಮಾಹಿತಿ ಇಟ್ಟುಕೊಂಡು ಮಾತನಾಡಬೇಕು. ಶಾಮನೂರಿಗೆ ಅವರು ಬೇಕಾದ ಅಧಿಕಾರಿಗಳನ್ನ ಹಾಕಿಕೊಳ್ಳಲಿ ಬೇಕಾದ್ರೆ ಅಂತಾ ಟಾಂಗ್ ಕೊಟ್ಟರು. ಶಾಮನೂರು ಶಿವಶಂಕರಪ್ಪಗೆ ಮಾಹಿತಿ ಕೊರತೆ ಇದೆ. ದಾವಣಗೆರೆಯಲ್ಲಿ ಜಿಪಂ ಸಿಇಓ ಲಿಂಗಾಯತ ಸಮುದಾಯದವರೇ (Lingayat Community) ಆಗಿದ್ದಾರೆ. ಶಾಮನೂರು ಜಾತಿ ವಿಚಾರ ಮಾತನಾಡಿದ್ದು ತಪ್ಪು. ಅವರದ್ದು ಡ್ಯುಯೆಲ್ ರೋಲ್, ನಾನಂತೂ ಎಂದೂ ಜಾತಿ ಆಧಾರದ ಮೇಲೆ ಮಂತ್ರಿ ಮಾಡಿ ಅಂತ ಕೇಳಲ್ಲ. ಅನರ್ಹರೆಲ್ಲ ನಾಳೆ ಜಾತಿ ಆಧರಿಸಿ ಬಂದು ಕೂರುತ್ತಾರೆ. ಯಾವುದೇ ಸಮುದಾಯದವರೂ ಹೀಗೆ ಮಾತನಾಡಬಾರದು ಅಂತ ಬಯಸುತ್ತೇನೆ ಅಂತ ಹೇಳಿದ್ದಾರೆ.
Advertisement
Advertisement
ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ, ಸಿದ್ದರಾಮಯ್ಯ ಬಡವರ ಪರ ಇದ್ದಾರೆ. ಸಿದ್ದರಾಮಯ್ಯ ಶೋಷಣೆಗೆ ಒಳಪಟ್ಟ ಸಮುದಾಯಗಳ ಪರ ಇದ್ದಾರೆ. ಲಿಂಗಾಯತ ಸಮುದಾಯದ ಡಾಮಿನೇಟೇಡ್ ಕ್ಲಾಸ್. ಲಿಂಗಾಯತರ ಮನೆಗೆ ಶೋಷಿತ ಸಮುದಾಯವರು ಹೋಗಬೇಕು. ಲಿಂಗಾಯತರು ಶೋಷಿತರ ಮನೆಗೆ ಹೋಗಲ್ಲ ನಮ್ ಕಡೆ, ಇದು ವ್ಯವಸ್ಥೆ. ಆದ್ರೆ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ ಅಂತ ಶಾಮನೂರು ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: Maharashtra: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು
ಸಿದ್ದರಾಮಯ್ಯ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ನಾನು ಒಪ್ಪಲ್ಲ. ಬಸವ ತತ್ವ ಪಾಲನೆ ಮಾಡುವವರು ಸಿದ್ದರಾಮಯ್ಯ. ಬಸವೇಶ್ವರರ ಫೋಟೋ ಹಾಕುವಂತೆ ಕಡ್ಡಾಯ ಮಾಡಿದವರು ಸಿದ್ದರಾಮಯ್ಯ. ಹಿಂದೆ ಸಿಎಂ ಆದವರು ಯಾಕೆ ಈ ಆದೇಶ ಮಾಡಿರಲಿಲ್ಲ? ಅಕ್ಕಮಹಾದೇವಿ ವಿಶ್ವವಿದ್ಯಾಲಯ ಅಂತ ಹೆಸರಿಟ್ಟಿದ್ದು, ನಮ್ಮ ಸರ್ಕಾರ. ಬಸವೇಶ್ವರ ವಿಶ್ವವಿದ್ಯಾಲಯ ಅಂತ ಹಿಂದಿನ ಬಿಜೆಪಿ ಸರ್ಕಾರ ಯಾವುದಕ್ಕೂ ಹೆಸರಿಡಲಿಲ್ಲ. ಜಾತಿ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸ ಯಾರೂ ಮಾಡಬಾರದು ಅಂತ ತಿರುಗೇಟು ನೀಡಿದ್ದಾರೆ.
ನಾನು ಸಿದ್ದರಾಮಯ್ಯ ಪರ ವಕಾಲತ್ತು ವಹಿಸುತ್ತಿಲ್ಲ. ನನ್ನನ್ನ ಸಚಿವರನ್ನಾಗಿ ಮಾಡಿ, ಏನಾದರೂ ಮಾಡಿ ಅಂತಾ ಭಿಕ್ಷೆ ಬೇಡಲ್ಲ. ನಾನು ಭಿಕ್ಷೆ ಬೇಡಲ್ಲ ಜಾತಿ ಆಧಾರದ ಮೇಲೆ ಅಧಿಕಾರಿಗಳ ವರ್ಗಾವಣೆ ಬೇಡ, ಆಡಳಿತ ಕುಸಿಯುತ್ತೆ, ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ
Web Stories