ಬೆಂಗಳೂರು: ಬಾಸ್ಕೆಟ್ ಬಾಲ್ ಕೋಚ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋನಿಯಾ (26) ಆತ್ಮಹತ್ಯೆಗೆ ಶರಣಾದ ಕೋಚ್. ಪೋತ್ಲಪ್ಪ ಗಾರ್ಡನ್‌ನ ಮನೆಯಲ್ಲಿ ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆಡುಗೋಡಿ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ.
ಸೋನಿಯಾ ಕಳೆದ ಏಳೆಂಟು ವರ್ಷಗಳಿಂದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಟೂರ್ನಿಗಳಲ್ಲಿ ಭಾಗಿಯಾಗಿದ್ದರು. ಮುಂದಿನ ತಿಂಗಳು ದುಬೈನಲ್ಲಿ ಟೂರ್ನಿಯಲ್ಲಿ ಆಡಬೇಕಿತ್ತು. ಆದರೆ, ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಸ್ನಾನ ಮಾಡುವಾಗ ಬಾತ್‌ರೂಮ್‌ನಲ್ಲಿ ಬಿದ್ದು ಸಾವಿಗೀಡಾಗಿದ್ದಾಳೆ ಅಂತ ಕುಟುಂಬಸ್ಥರು ಹೇಳುತ್ತಿದ್ದಾರೆ. ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಸಾವಾಗಿದೆ ಎಂದಿದ್ದಾರೆ. ಸದ್ಯ ಕೋಚ್ ಸೋನಿಯಾ ಸಾವಿನ ಬಗ್ಗೆ ಅನುಮಾನಗಳು ಮೂಡಿವೆ.