ಕೊಲಂಬೋ: ಅಧ್ಯಕ್ಷ ಗೋಟಬಯ ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ಭಾರತ ಸಹಕಾರ ನೀಡಿಲ್ಲ ಎಂದು ಕೊಲಂಬೋದಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.
ರಾಜಪಕ್ಸೆ ಶ್ರೀಲಂಕಾದಿಂದ ಮಾಲ್ಡೀವ್ಸ್‌ಗೆ ತೆರಳಲು ಭಾರತ ಸಹಾಯ ಮಾಡಿದೆ ಎಂಬ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ರಾಯಭಾರ ಕಚೇರಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪಕ್ಸೆ
Advertisement
as they seek to realize their aspirations for prosperity and progress through democratic means and values , established democratic institutions and constitutional framework.(2/2)
— India in Sri Lanka (@IndiainSL) July 13, 2022
Advertisement
ಅಧ್ಯಕ್ಷ ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ಭಾರತವು ಅನುಕೂಲ ಮಾಡಿಕೊಟ್ಟಿದೆ ಎಂಬ ಆಧಾರರಹಿತ ಮತ್ತು ಊಹಾತ್ಮಕ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಾವು ಶ್ರೀಲಂಕಾ ಜನರ ಜೊತೆ ಇದ್ದೇವೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.
Advertisement
ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಮತ್ತು ಸರ್ಕಾರದ ಕೋರಿಕೆಯ ಮೇರೆಗೆ ಅಧ್ಯಕ್ಷ, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳನ್ನು ಮಾಲ್ಡೀವ್ಸ್‌ಗೆ ಕಳುಹಿಸಲು ವಿಮಾನವನ್ನು ಒದಗಿಸಿದೆ ಎಂದು ಶ್ರೀಲಂಕಾದ ವಾಯುಪಡೆ ತಿಳಿಸಿತ್ತು.